Saturday, 23rd November 2024

IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ

ವೆಲ್ಲಿಂಗ್ಟನ್‌: ಭಾರತ ವಿರುದ್ಧ ಈಗಾಗಲೇ ಸತತ 2 ಟೆಸ್ಟ್‌ ಪಂದ್ಯ ಗೆದ್ದು ಐತಿಹಾಸಿಕ ಸರಣಿ ವಶಪಡಿಸಿಕೊಂಡಿರುವ ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ) ಅಂತಿಮ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದೆ. ತೊಡೆಸಂದು ಗಾಯದಿಂದ ಮೊದಲೆರಡು ಟೆಸ್ಟ್‌ನಿಂದ ಹೊರಗುಳಿದಿದ್ದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್(Kane Williamson) ಸರಣಿಯ ಮೂರನೇ ಮತ್ತು ಅಂತಿಮ ಟೆಸ್ಟ್‌ಗೂ ಅಲಭ್ಯರಾಗಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ಮಂಗಳವಾರ(ಅಕ್ಟೋಬರ್ 29) ಪ್ರಕಟಿಸಿದೆ. ವಿಲಿಯಮ್ಸನ್ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯ ಸಂದರ್ಭದಲ್ಲಿ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಂಡದ ಕೋಚ್‌ ಗ್ಯಾರಿ ಸ್ಟೇಡ್ ತಿಳಿಸಿದ್ದಾರೆ.

ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್‌ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್,ವಿಲ್ ಓರೊರ್ಕ್,ಅಜಾಜ್ ಪಟೇಲ್,ಗ್ಲೆನ್ ಪಿಲಿಪ್ಸ್,ರಚಿನ್ ರವೀಂದ್ರ,ಮಿಚೆಲ್ ಸ್ಯಾಂಟ್ನರ್,ಬೆನ್ ಸೀರ್ಸ್,ಟಿಮ್ ಸೌಥಿ,ವಿಲ್ ಯಂಗ್, ಐಶ್ ಸೋಧಿ, ಮಾರ್ಕ್ ಚಾಪ್‌ಮನ್.

ಇದನ್ನೂ ಓದಿ IND vs SA T20I: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಲಕ್ಷ್ಮಣ್‌ ಕೋಚ್‌

ಭಾರತ ತಂಡ: ರೋಹಿತ್ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್‌ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್.

ಮುಂಬೈಯಲ್ಲಿ ಇತ್ತಂಡಗಳ ಟೆಸ್ಟ್‌ ಸಾಧನೆ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ 2012 ರಿಂದ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ನವೆಂಬರ್ 2012 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಭಾರತ ಟೆಸ್ಟ್ ಸರಣಿ ಸೋತಿತ್ತು. ಆ ಬಳಿಕ ಭಾರತ 2013ರಲ್ಲಿ ವೆಸ್ಟ್ ಇಂಡೀಸ್, 2016ರಲ್ಲಿ ಇಂಗ್ಲೆಂಡ್ ಹಾಗೂ 2021ರಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಭಾರತ ಇಲ್ಲಿ 26 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 12ರಲ್ಲಿ ಗೆಲುವು, 7ರಲ್ಲಿ ಸೋಲು, 7 ಪಂದ್ಯಗಳು ಡ್ರಾ ಆಗಿವೆ.

ಭಾರತ ಮತ್ತು ಕಿವೀಸ್‌ ತಂಡಗಳು ಇದುವರೆಗೆ ಇಲ್ಲಿ ಒಟ್ಟು ಮೂರು ಬಾರಿ ಟೆಸ್ಟ್‌ ಆಡಿದೆ. ಮೊಟ್ಟ ಮೊದಲ ಬಾರಿಗೆ ಮುಖಾಮುಖಿಯಾದದ್ದು 1976ರಲ್ಲಿ ಈ ಪಂದ್ಯವನ್ನು ಭಾರತ 162 ರನ್‌ ಅಂತರದಿಂದ ಗೆದ್ದಿತ್ತು. 2ನೇ ಮುಖಾಮುಖಿ 1988ರಲ್ಲಿ ಈ ಪಂದ್ಯವನ್ನು ಕಿವೀಸ್‌ 136 ರನ್‌ ಅಂತರದಿಂದ ಜಯಿಸಿತ್ತು. ಮೂರನೇ ಬಾರಿಗೆ ಆಡಿದ್ದು 2021ರಲ್ಲಿ. ಈ ಪಂದ್ಯದಲ್ಲಿ ಕಿವೀಸ್‌ನ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಇನ್ನಿಂಗ್ಸ್‌ ಒಂದರ ಎಲ್ಲ 10 ವಿಕೆಟ್‌ ಉರುಳಿಸಿದ್ದರು. ಆದರೂ ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ 372 ರನ್‌ ಅಂತರದ ಸೋಲು ಕಂಡಿತ್ತು.