Sunday, 24th November 2024

IND vs NZ: ಮಳೆಗೆ ಕೊಚ್ಚಿ ಹೋದ ಮೊದಲ ದಿನದಾಟ

ಬೆಂಗಳೂರು: ಬಹುನಿರೀಕ್ಷಿತ ಭಾರತ ಮತ್ತು ನ್ಯೂಜಿಲೆಂಡ್‌(IND vs NZ) ನಡುವಣ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮಳೆ ಕಾರಣ ಟಾಸ್‌ ಕೂಡ ಕಾಣದೆ ರದ್ದುಗೊಂಡಿತು. ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬುಧವಾರ ಕೂಡ ಮಳೆಯ ಕಣ್ಣಾಮುಚ್ಚಾಲೆ ಕಂಡು ಬಂತು.

ಗುರುವಾರವೂ ಶೇ.90ರಷ್ಟು ಮಳೆ ಬೀಳುವ ನಿರೀಕ್ಷೆಯಿದ್ದು ದ್ವಿತೀಯ ದಿನದಾಟ ಕೂಡ ನಡೆಯುವುದು ಅನುಮಾನ. ಪಂದ್ಯದ 3ನೇ ದಿನ ಮಳೆಯ ಸಾಧ್ಯತೆ ಕಡಿಮೆಯಾಗುವ ನಿರೀಕ್ಷೆ ಇದೆ. ಬಹುಶಃ ಪಂದ್ಯ ಕೂಡ ಅಂದೇ ಆರಂಭವಾದೀತೆಂಬುದು ಸದ್ಯದ ನಿರೀಕ್ಷೆ. ಬುಧವಾರ ವಿರಾಟ್‌ ಕೊಹ್ಲಿ, ಯಶಸ್ವಿ ಜೈಸ್ವಾಲ್‌ ಸೇರಿ ಹಲವು ಆಟಗಾರರು ಮೈದಾನಕ್ಕೆ ಹಲವು ಬಾರಿ ಬ್ಯಾಟಿಂಗ್‌ ಅಭ್ಯಾಸ ನಡೆಸಲು ಬಂದರೂ ಕೂಡ ಮಳೆ ಅನುವು ಮಾಡಿಕೊಡಲಿಲ್ಲ. ತುಂತುರು ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು. ಮಧ್ಯಾಹ್ನ 2.15ಕ್ಕೆ ಚಹಾ ವಿರಾಮ ಘೋಷಿಸಿ ಬಳಿಕ ಅಂತಿಮವಾಗಿ 2.40ರ ವೇಳೆಗೆ ಅಂಪೈರ್‌ಗಳು ದಿನದಾಟ ರದ್ದು ಎಂದು ಘೋಷಿಸಿದರು. ಪಂದ್ಯವನ್ನು ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳು ನಿರಾಸೆಯೊಂದಿಗೆ ತೆರಳಿದರು.

ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಇದಾಗಿದೆ. 2022ರ ಮಾರ್ಚ್​ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಭಾರತ ಇಲ್ಲಿ ಪಂದ್ಯವನ್ನಾಡಿತ್ತು. ನಾಯಕ ವಿರಾಟ್‌ ಕೊಹ್ಲಿ. ಪಂದ್ಯವನ್ನು 238 ರನ್​ಗಳಿಂದ ಗೆಲುವು ಸಾಧಿಸಿತ್ತು.

ಇದನ್ನೂ ಓದಿ IND vs NZ: ಬೆಂಗಳೂರಿನ ಬಗ್ಗೆ ಕಿವೀಸ್‌ ಆಟಗಾರನ ಮನದಾಳದ ಮಾತು

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುತ್ತಿರುವ 25 ಟೆಸ್ಟ್​ ಪಂದ್ಯ ಇದಾಗಿದೆ. ಇದೇ ವೇಳೆ 25 ಅಥವಾ ಅದಕ್ಕಿಂತ ಹೆಚ್ಚು ಭಾರತದ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಿದ ದೇಶದ 5ನೇ ಕ್ರಿಕೆಟ್‌ ಮೈದಾನವಾಗಿ ಗುರುತಿಸಿಕೊಳ್ಳಲಿದೆ. ಅತಿ ಹೆಚ್ಚು ಟೆಸ್ಟ್‌ ಪಂದ್ಯದ ಆತಿಥ್ಯವಹಿಸಿಕೊಂಡ ಇದುವರೆಗಿನ ಸ್ಟೇಡಿಯಂಗಳೆಂದರೆ ಈಡನ್​ ಗಾರ್ಡನ್ಸ್​, ಕೋಲ್ಕತಾ (42), ಚಿದಂಬರಂ, ಚೆನ್ನೈ (35), ಅರುಣ್​ ಜೇಟ್ಲಿ ಸ್ಟೇಡಿಯಂ, ನವದೆಹಲಿ (35), ವಾಂಖೆಡೆ, ಮುಂಬೈ (26).

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್ /ಕುಲೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಡೆವೋನ್ ಕಾನ್‌ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಡೇರಲ್ ಮಿಚೆಲ್, ಟಾಮ್ ಬಂಡೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್ /ಬ್ರೇಸ್‌ವೆಲ್, ಸೌಥಿ, ಅಜಾಜ್, ಒ‌ರ್ಕ