ಬೆಂಗಳೂರು: ಪ್ರವಾಸಿ ನ್ಯೂಜಿಲ್ಯಾಂಡ್(IND vs NZ Test) ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇತ್ತಂಡಗಳ ನಡುವಣ ಮೊದಲ ಪಂದ್ಯ ಅಕ್ಟೋಬರ್ 16ಕ್ಕೆ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಅಣಿಯಾಗಿದೆ. ಪಂದ್ಯವನ್ನಾಡಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ(Rohit Sharma), ವಿರಾಟ್ ಕೊಹ್ಲಿ(Virat Kohli) ಸೇರಿ ಕೆಲ ಆಟಗಾರರು ಬೆಂಗಳೂರು ತಲುಪಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಅಭ್ಯಾಸ ಫೋಟೊಗಳು ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೆಂಗಳೂರಿಗೆ ಆಗಮಿಸಿದ ವಿಡಿಯೊವನ್ನು ಅವರ ಅಭಿಮಾನಿಗಳು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಬೆಂಗಳೂರಿಗೆ ಬರುವ ಮುನ್ನವೇ ಕಳೆದೊಂದು ವಾರದಿಂದ ಮುಂಬೈಯ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸಿದ್ದರು. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರೋಹಿತ್ ನಿರೀಕ್ಷಿತ ಬ್ಯಾಟಿಂಗ್ ತೋರ್ಪಡಿಸುವಲ್ಲಿ ವಿಫಲರಾಗಿದ್ದರು. ಕೊಹ್ಲಿ ಕೂಡ ಅವರ ಖ್ಯಾತಿಗೆ ತಕ್ಕ ಆಡವಾಡಿರಲಿಲ್ಲ. ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ ಕೂಡ ಇರುವ ಕಾರಣ ಉಭಯ ಆಟಗಾರರು ಕಿವೀಸ್ ವಿರುದ್ಧ ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಭಾರತ ಗೆಲುವು ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. ಅದರ ಉಳಿದ ಎಂಟು ಟೆಸ್ಟ್ಗಳಲ್ಲಿ ಒಂದನ್ನು ಗೆಲ್ಲುವುದರಿಂದ ಅದರ ಶೇಕಡಾವಾರು 85.09 ಕ್ಕೆ ಏರಿಕೆಯಾಗುತ್ತದೆ.
ಇದನ್ನೂ ಓದಿ IND vs BAN: ಅರ್ಧಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ಮೊಹಮ್ಮದ್. ಸಿರಾಜ್, ಆಕಾಶ್ ದೀಪ್. ಪ್ರಯಾಣ ಮೀಸಲು: ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ಯಾದವ್, ಪ್ರಸಿದ್ಧ್ ಕೃಷ್ಣ.
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್,ವಿಲ್ ಓರೊರ್ಕ್,ಅಜಾಜ್ ಪಟೇಲ್,ಗ್ಲೆನ್ ಪಿಲಿಪ್ಸ್,ರಚಿನ್ ರವೀಂದ್ರ,ಮಿಚೆಲ್ ಸ್ಯಾಂಟ್ನರ್,ಬೆನ್ ಸೀರ್ಸ್,ಟಿಮ್ ಸೌಥಿ,ವಿಲ್ ಯಂಗ್,ಮೈಕಲ್ ಬ್ರೇಸ್ವೆಲ್ (ಮೊದಲ ಟೆಸ್ಟ್),ಐಶ್ ಸೋಧಿ (2ನೇ ಹಾಗೂ 3ನೇ ಟೆಸ್ಟ್), ಮಾರ್ಕ್ ಚಾಪ್ಮನ್.
ಸರಣಿ ವೇಳಾಪಟ್ಟಿ
ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು
ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ
ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ