Wednesday, 23rd October 2024

IND vs NZ: ರೋಹಿತ್‌ ನಿರ್ಧಾರ ಪ್ರಶ್ನಿಸಿದ ಮಂಜ್ರೇಕರ್

Test cricket

ನವದೆಹಲಿ: ಬೆಂಗಳೂರಿನ(Bengaluru) ಚಿನ್ನಸ್ವಾಮಿ ಮೈದಾನದಲ್ಲಿ(Chinnaswamy Stadium)ನಡೆದ ನ್ಯೂಜಿಲೆಂಡ್(IND vs NZ) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ(Test cricket) ಭಾರತ ತಂಡ 8 ವಿಕೆಟ್‌ಗಳ ಸೋಲು ಕಂಡಿತ್ತು. ಈ ಸೋಲಿನ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್(Sanjay Manjrekar) ನಾಯಕ ರೋಹಿತ್ ಶರ್ಮಾ(Rohit Sharma) ನಿರ್ಧಾರದ ಬಗ್ಗೆ ಪ್ರಶ್ನಿಸಿದ್ದಾರೆ.

ಪಂದ್ಯದ 5ನೇ ದಿನ ಕಾರ್ಯ ತಂತ್ರ ರೂಪಿಸುವಲ್ಲಿ ನಾಯಕ ರೋಹಿತ್‌ ವಿಫಲರಾಗಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಬಳಿಕ ಆರ್‌.ಅಶ್ವಿನ್‌ ಅವರನ್ನು ಕಣಕ್ಕಿಳಿಸಬೇಕಿತ್ತು, ಏಕೆಂದರೆ ಅಶ್ವಿನ್‌ ಹೊಸ ಚೆಂಡಿನಲ್ಲಿ ಉತ್ತಮ ದಾಳಿ ಸಂಘಟಿಸುತ್ತಾರೆ. ಇದು ತಿಳಿದಿದ್ದರೂ ಕೂಡ ರೋಹಿತ್‌, ಸಿರಾಜ್‌ ಮತ್ತು ಜಡೇಜಾಗೆ ಬೌಲಿಂಗ್‌ ನೀಡಿದ್ದು ಸರಿಯಲ್ಲ. ಅಶ್ವಿನ್‌ಗೆ ಮೊದಲೇ ಬೌಲಿಂಗ್‌ ನೀಡುತ್ತಿದ್ದರೆ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸುವ ಸಾಧ್ಯತೆ ಅಧಿಕವಾಗಿತ್ತು ಎಂದು ಮಂಜ್ರೇಕರ್ ನಾಯಕನ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ IND vs NZ: ಸೋಲಿನ ಬೆನ್ನಲ್ಲೇ ತಂಡಕ್ಕೆ ಹೊಸ ಆಟಗಾರನ ಸೇರ್ಪಡೆಗೊಳಿಸಿದ ಬಿಸಿಸಿಐ

ತಪ್ಪೊಪ್ಪಿಕೊಂಡಿದ್ದ ರೋಹಿತ್

ಹವಾಮಾನ ವೈಪರಿತ್ಯದ ನಡುವೆ ಮೊದಲು ಬ್ಯಾಟಿಂಗ್ ಮಾಡುವ ಕೆಟ್ಟ ನಿರ್ಧಾರ ಕೈಗೊಂಡ ಭಾರತ ತಂಡ, ತವರಿನ ಅಂಗಣದಲ್ಲಿ 31.2 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತ್ತು. ಸುರಿದ ಜಡಿಮಳೆಯಿಂದಾಗಿ ಪಿಚ್ ಅನ್ನು ಸಂಪೂರ್ಣವಾಗಿ ಹೊದಿಕೆಯಿಂದ ಮುಚ್ಚಲಾಗಿತ್ತು. ಆದರೂ, ಬುಧವಾರ ಸಂಜೆ ಹಾಗೂ ಗುರುವಾರ ಬೆಳಗ್ಗೆ ಎರಡೂ ದಿನ ಪಿಚ್ ಪರಿಶೀಲಿಸಿದ ರೋಹಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ ಎನಿಸಿತ್ತು. ದಿನದಾಟದ ನಂತರ ಸುದ್ದಿಗೋಷ್ಠಿಗೆ ಹಾಜರಾದ ರೋಹಿತ್, ಪಿಚ್ ಅರಿಯುವಲ್ಲಿ ಎಡವಿದೆ ಎಂದು ತಪ್ಪೊಪ್ಪಿಕೊಂಡಿದ್ದರು.

ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್‌ ಶರ್ಮಾ(Rohit Sharma), ಈ ಸೋಲಿನಿಂದ ಯಾರೂ ಗಾಬರಿಯಾಗಬೇಕಿಲ್ಲ, ಮುಂದಿನ ಪಂದ್ಯದಲ್ಲಿ ನಾವು ಗೆಲುವಿನ ಲಯಕ್ಕೆ ಮರಳುತ್ತೇವೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ಮೊದಲ ಮೂರು ಗಂಟೆಗಳನ್ನು ಹೊರತುಪಡಿಸಿ, ನಾವು ಉತ್ತಮ ಟೆಸ್ಟ್ ಕ್ರಿಕೆಟ್ ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಮೊದಲ ಇನಿಂಗ್ಸ್​ನಲ್ಲಿ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು ನಮ್ಮ ಪಾಲಿಗೆ ಮುಳುವಾಯಿತು. ಒಂದು ಪಂದ್ಯದ ಸೋಲಿನಿಂದ ತಂಡದ ಪ್ರದರ್ಶನವನ್ನು ಟೀಕಿಸುಔುದು ಸರಿಯಲ್ಲ. ಈ ಸೋಲು ನಮಗೆ ಪಾಠ ಇದ್ದಂತೆ. ಸೋಲಿನಿಂದ ತಂಡ ಹಲವು ಪಾಠ ಕಲಿತಿದೆ” ಎಂದು ರೋಹಿತ್ ಹೇಳಿದರು. ಮಳೆಯನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ನೆರದಿದ್ದ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೂ ರೋಹಿತ್‌ ಧನ್ಯವಾದ ತಿಳಿಸಿದರು.