ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (IND vs SA) ಭಾರತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಐದು ವಿಕೆಟ್ ಸಾಧನೆ ಮಾಡಿದ್ದರು. ಇದರ ಹೊರತಾಗಿಯೂ ಟೀಮ್ ಇಂಡಿಯಾ ಮೂರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ವರುಣ್ ಚಕ್ರವರ್ತಿ, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಬಾಂಗ್ಲಾದೇಶ ಟಿ20ಐ ಸರಣಿಯ ವೇಳೆ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
2021ರ ಐಸಿಸಿ ಟಿ20ಐ ವಿಶ್ವಕಪ್ ಬಳಿಕ ವರುಣ್ ಚಕ್ರವರ್ತಿ ಅವರು ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೂ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದ್ದರು. ಇದರ ಫಲವಾಗಿ ಕಳೆದ ಬಾಂಗ್ಲಾದೇಶ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡಕ್ಕೆ ವರುಣ್ ಕಮ್‌ಬ್ಯಾಕ್ ಮಾಡಿದ್ದರು ಹಾಗೂ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಅದರಂತೆ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐ ಸರಣಿಯಲ್ಲಿಯೂ ಅದೇ ಲಯವನ್ನು ಅವರು ಮುಂದುವರಿಸಿದ್ದಾರೆ.
4⃣ Overs
— BCCI (@BCCI) November 10, 2024
1⃣7⃣ Runs
5⃣ Wickets
Varun Chakaravarthy was an absolute rage today! 👌👌
Live ▶️ https://t.co/ojROEpNnzy #TeamIndia | #SAvIND pic.twitter.com/QJ6H5uZWYg
ಭಾನುವಾರ ಮೆಬೇಕದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ ಸೇರಿದಂತೆ ಪ್ರಮುಖ ಐದು ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದರು. ಪಂದ್ಯದ ಬಳಿಕ ಮಾತನಾಡಿದ ವರುಣ್ ಚಕ್ರವರ್ತಿ, ಬಾಂಗ್ಲಾದೇಶ ವಿರುದ್ಧದ ಟಿ20ಐ ಸರಣಿಯ ವೇಳೆ ಗೌತಮ್ ಗಂಭೀರ್ ನೀಡಿದ್ದ ಸಲಹೆಯು ನನಗೆ ತುಂಬಾ ನೆರವು ನೀಡಿದೆ ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಸಲಹೆ ನೆನೆದ ವರುಣ್
“ಹೌದು, ಬಾಂಗ್ಲಾದೇಶ ಪ್ರವಾಸದಲ್ಲಿ ನಾವು ಆಡಿದ್ದೆವು ಹಾಗೂ ಗೌತಮ್ ಗಂಭೀರ್ ನಮಗೆ ಹೆಡ್ ಕೋಚ್ ಆಗಿದ್ದರು. ಈ ವೇಳೆ ನಾವು ಸಾಕಷ್ಟು ಸಂಗತಿಗಳ ಬಗ್ಗೆ ಚರ್ಚೆ ನಡೆಸಿದ್ದೆವು ಹಾಗೂ ಅವರು ನನಗೆ ನನ್ನ ಪಾತ್ರದ ಬಗ್ಗೆ ಸ್ಪಷ್ಟತೆಯನ್ನು ನೀಡಿದ್ದರು. ಅವರು, ʻನೀವು 30-40 ರನ್ ಕೊಟ್ಟರೂ ಪರವಾಗಿಲ್ಲ, ಇದು ಯಾವುದೇ ವಿಷಯವಲ್ಲ ಆದರೆ, ನೀವು ವಿಕೆಟ್‌ಗಳನ್ನು ಪಡೆಯುವ ಕಡೆಗೆ ಗಮನವನ್ನು ಕೊಡಬೇಕು.ಇದು ತಂಡದಲ್ಲಿ ನಿಮ್ಮ ಪಾತ್ರʼ ಎಂದಿದ್ದರು. ಅವರು ನೀಡಿದ್ದ ಈ ಸ್ಪಷ್ಟತೆ ನನಗೆ ತುಂಬಾ ಸಹಾಯವಾಗಿದೆ,” ಎಂದು ವರುಣ್ ಚಕ್ರವರ್ತಿ ರಿವೀಲ್ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ನನ್ನ ಪಾಲಿಗೆ ಕಠಿಣವಾಗಿತ್ತು: ಚಕ್ರವರ್ತಿ
“ಖಚಿತವಾಗಿಯೂ ಕಳೆದ ಮೂರು ವರ್ಷಗಳು ನನ್ನ ಪಾಲಿಗೆ ತುಂಬಾ ಕಠಿಣವಾಗಿದ್ದವು. ಈ ಅವಧಿಯಲ್ಲಿ ನಾನು ಮಾಡಿದ್ದ ಕೆಲಸ ಏನೆಂದರೆ ಸಿಕ್ಕಾಪಟ್ಟೆ ಕ್ರಿಕೆಟ್ ಆಡಿದ್ದೇನೆ. ಭಾರತದಲ್ಲಿ ನಾನು ಸಾಕಷ್ಟು ದೇಶಿ ಕ್ರಿಕೆಟ್ ಆಡಿದ್ದೇನೆ. ಇದರಿಂದ ನನ್ನ ಆಟವನ್ನು ಅರ್ಥ ಮಾಡಿಕೊಳ್ಳಲು ತುಂಬಾ ನೆರವಾಯಿತು,” ಎಂದು ವರುಣ್ ಚಕ್ರವರ್ತಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs SA: 5 ವಿಕೆಟ್ ಸಾಧನೆ ಮಾಡಿದ ವರುಣ್ ಚಕ್ರವರ್ತಿ ಬಗ್ಗೆ ಸೂರ್ಯಕುಮಾರ್ ಹೇಳಿದ್ದಿದು!