Friday, 22nd November 2024

IND vs SA: ಸತತ ಎರಡನೇ ಬಾರಿ ಡಕ್‌ಔಟ್‌ ಆಗಿ ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌!

Sanju Samson Creates EMBARRASSING Histor

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿಯೂ (IND vs SA) ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಡಕ್‌ಔಟ್‌ ಆದರು. ಸತತ ಎರಡನೇ ಬಾರಿ ಡಕ್‌ಔಟ್‌ ಆಗುವ ಮೂಲಕ ಸಂಜು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಅನಗತ್ಯ ದಾಖಲೆ ಬರೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿಯ ಮೊದಲನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅವರು ಸತತ ಎರಡನೇ ಶತಕವನ್ನು ಸಿಡಿಸಿದ್ದರು. ಆದರೆ, ಎರಡನೇ ಟಿ20ಐ ಪಂದ್ಯದಲ್ಲಿ ಡಕ್‌ಔಟ್‌ ಆಗಿದ್ದರು. ಬುಧವಾರ ಸೆಂಚುರಿಯನ್‌ನಲ್ಲಿ ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಆಡಿದ ಎರಡನೇ ಎಸೆತದಲ್ಲಿ ಮಾರ್ಕೊ ಯೆನ್ಸನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಆ ಮೂಲಕ ಸತತ ಎರಡನೇ ಬಾರಿ ಡಕ್‌ಔಟ್‌ ಆದರು. ಮೊದಲನೇ ಎಸೆತವನ್ನು ಲೆಗ್‌ ಸೈಡ್‌ ಆಡಿದ್ದ ಸಂಜು, ಸಿಂಗಲ್‌ ಪಡೆಯಲು ಪ್ರಯತ್ನಿಸಿ ವಿಫಲರಾಗಿದ್ದರು ಹಾಗೂ ನಂತರದ ಎಸೆತ ಬೌನ್ಸ್‌ ಆಗದೆ ಚೆಂಡು ನೇರವಾಗಿ ಸ್ಟಂಪ್ಸ್‌ಗೆ ತಾಗಿತ್ತು. ಈ ವೇಳೆ ಅಸಮಾಧಾನದೊಂದಿಗೆ ಸಂಜು ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.

IND vs SA: ʻಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಫಿಕ್ಸ್‌ʼ-ದಿನೇಶ್‌ ಕಾರ್ತಿಕ್‌!

ಅನಗತ್ಯ ದಾಖಲೆ ಬರೆದ ಸಂಜು ಸ್ಯಾಮ್ಸನ್‌

ಮೂರನೇ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು ಸ್ಯಾಮ್ಸನ್‌ ಅವರು 2024ರಲ್ಲಿ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಐದನೇ ಬಾರಿ ಡಕ್‌ಔಟ್‌ ಆಗಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ನ ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಐದು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎರಡನೇ ಟಿ20ಐ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು, ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದರು.

ಏಕೈಕ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್‌ಔಟ್‌ ಆದ ಭಾರತೀಯ ಆಟಗಾರರು

5 – ಸಂಜು ಸ್ಯಾಮ್ಸನ್ (2024)
3 – ಯೂಸಫ್ ಪಠಾಣ್ (2009)
3 – ರೋಹಿತ್ ಶರ್ಮಾ (2018)
3 – ರೋಹಿತ್ ಶರ್ಮಾ (2022)
3 – ವಿರಾಟ್ ಕೊಹ್ಲಿ (2024)

IND vs SA: ʼನನ್ನ ಮಗನ 10 ವರ್ಷಗಳ ವೃತ್ತಿ ಜೀವನವನ್ನು ಈ ನಾಲ್ವರು ಹಾಳು ಮಾಡಿದ್ದಾರೆʼ-ಸಂಜು ಸ್ಯಾಮ್ಸನ್‌ ತಂದೆ ಶಾಕಿಂಗ್‌ ಹೇಳಿಕೆ!

ಅನಗತ್ಯ ದಾಖಲೆ ಬರೆದ ವಿಶ್ವದ ಮೊದಲ ಬ್ಯಾಟರ್‌

ಮೂರನೇ ಪಂದ್ಯದಲ್ಲಿ ಡಕ್‌ಔಟ್‌ ಆಗುವ ಮೂಲಕ ಸಂಜು ಸ್ಯಾಮ್ಸನ್‌ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿ ಡಕ್‌ ಔಟ್‌ ಆಗಿದ್ದಾರೆ. ಟಿ20ಐ ಕ್ರಿಕೆಟ್‌ ಇತಿಹಾಸದಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಬಳಿಕ ಸತತ ಎರಡು ಬಾರಿ ಡಕ್‌ಔಟ್‌ ಆದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಅನಗತ್ಯ ದಾಖಲೆಯನ್ನು ಸಂಜು ಸ್ಯಾಮ್ಸನ್‌ ಹೆಗಲೇರಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಚುಟಕು ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್‌ ಒಟ್ಟಾರೆ ಆರನೇ ಬಾರಿ ಡಕ್‌ಔಟ್‌ ಆಗಿದ್ದಾರೆ. ಆ ಮೂಲಕ ಕೆಎಲ್‌ ರಾಹುಲ್‌ ಅವನ್ನು ಹಿಂದಿಕ್ಕಿ ಅತಿ ಹೆಚ್ಚು ಡಕ್‌ಔಟ್‌ ಆದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಅನಗತ್ಯ ದಾಖಲೆ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ.