Friday, 22nd November 2024

IND vs SA: ಇಂದು ಮೊದಲ ಟಿ20; ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ

ಡರ್ಬನ್‌: ಇಷ್ಟು ದಿನ ದೀರ್ಘ ಸ್ವರೂಪದ ಟೆಸ್ಟ್‌ ಕ್ರಿಕೆಟ್‌ ಗುಂಗಿನಲ್ಲಿದ್ದ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಇನ್ನು ಚುಟುಕು ಮಾದರಿಯ ಟಿ20 ಕ್ರಿಕೆಟ್‌ನತ್ತ ತೆರೆದುಕೊಳ್ಳಲಿದ್ದಾರೆ. ಇಂದು ನಡೆಯುವ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಯುವ ಭಾರತ ತಂಡ ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಕಣಕ್ಕಿಳಿಯಲಿದೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದೆ. ಸ್ಪೋರ್ಟ್‌ 18ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.

ಇದು ಟಿ20 ವಿಶ್ವಕಪ್‌ ಫೈನಲ್‌ ಬಳಿಕ ಭಾರತ- ದಕ್ಷಿಣ ಆಫ್ರಿಕಾ ಆಡುತ್ತಿರುವ ಮೊದಲ ಸರಣಿಯಾಗಿದೆ. ಹೀಗಾಗಿ ಅಂದಿನ ಫೈನಲ್‌ ಜೋಶ್‌ ಸರಣಿಯುದ್ದಕ್ಕೂ ನಿರೀಕ್ಷೆ ಮಾಡಬಹುದು. ಅಂದು ಡೇವಿಡ್‌ ಮಿಲ್ಲರ್‌ ಅವರ ಕ್ಯಾಚೊಂದನ್ನು ಅಸಾಮಾನ್ಯ ರೀತಿಯಲ್ಲಿ ಹಿಡಿದು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಸೂರ್ಯಕುಮಾರ್‌ ಯಾದವ್‌ ಇಂದು ನಾಯಕನಾಗಿದ್ದಾರೆ. ಅಂದಿನ ಫೈನಲ್‌ ಸೋಲಿಗೆ ಸೋಲಿಗೆ ದೊಡ್ಡ ಮಟ್ಟದಲ್ಲೇ ಸೇಡು ತೀರಿಸಿಕೊಳ್ಳುವುದು ಐಡನ್‌ ಮಾರ್ಕ್‌ರಮ್‌ ಪಡೆಯ ಯೋಜನೆ. ಒಟ್ಟಾರೆ ಪಂದ್ಯಗಳು ಹೈವೋಲ್ಟೇಜ್‌ನಿಂದ ಕೂಡಿರುವುದಲ್ಲಿ ಅನುಮಾನವೇ ಬೇಡ.

ಕರ್ನಾಟಕದ ಭರವಸೆಯ ಬೌಲರ್‌ ವಿಜಯ್‌ಕುಮಾರ್‌ ವೈಶಾಖ್‌ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಇವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಅನುಭವಿ ಕಗಿಸೊ ರಬಾಡ ಈ ಸರಣಿಯಿಂದ ವಿಶ್ರಾಂತಿ ಬಯಸಿದ್ದರೂ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿಯೇ ಇದೆ. ಟಿ20 ಸ್ಪೆಷಲಿಸ್ಟ್‌ಗಳಾದ ಮಾರ್ಕ್‌ರಮ್‌, ಹೆಂಡ್ರಿಕ್ಸ್‌, ಜಾನ್ಸೆನ್‌, ಕ್ಲಾಸೆನ್‌, ಮಿಲ್ಲರ್‌, ಸ್ಟಬ್ಸ್ ಅವರಂಥ ಘಟಾನುಘಟಿ ಆಟಗಾರರಿದ್ದಾರೆ.

ಇದನ್ನೂ ಓದಿ IPL 2025 – ಚೆನ್ನೈನಲ್ಲಿ ರಚಿನ್‌ ರವೀಂದ್ರ ಅಭ್ಯಾಸ: ಚೆನ್ನೈ ಫ್ರಾಂಚೈಸಿ ವಿರುದ್ದ ಉತ್ತಪ್ಪ ಗುಡುಗು!

ಕಿಂಗ್ಸ್‌ಮೀಡ್‌ ಸ್ಟೇಡಿಯಂ ಪಿಚ್‌ ಬೌಲರ್‌ಗಳಿಗೆ ನೆರವು ನೀಡಲಿದೆ. ಅದರಲ್ಲಿಯೂ ವಿಶೇಷವಾಗಿ ಫಾಸ್ಟ್‌ ಬೌಲರ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳೇ ಹೆಚ್ಚು ಗೆದ್ದಿರುವ ಕಾರಣ ಟಾಸ್‌ ಗೆದ್ದ ನಾಯಕ ಬ್ಯಾಟಿಂಗ್‌ಗೆ ಮೊದಲ ಆದ್ಯತೆ ನೀಡಬಹುದು. ಉಭಯ ತಂಡಗಳು ಇದುವರೆಗೆ 27 ಟಿ20ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ 15 ಪಂದ್ಯ, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಸಂಭಾವ್ಯ ಆಡುವ ಬಳಗ

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿ.ಕೀ), ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ತಿಲಕ್‌ ವರ್ಮಾ, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಯಶ್‌ ದಯಾಳ್‌/ವಿಜಯ್‌ಕುಮಾರ್‌ ವೈಶಾಖ್‌.

ದಕ್ಷಿಣ ಆಫ್ರಿಕಾ: ಐಡೆನ್‌ ಮಾರ್ಕ್ರಮ್‌ (ನಾಯಕ), ರೀಝಾ ಹೆಂಡ್ರಿಕ್ಸ್‌, ರಿಯಾನ್‌ ರಿಕಲ್ಟನ್‌, ಟ್ರಿಸ್ಟನ್‌ ಸ್ಟಬ್ಸ್‌, ಹೆನ್ರಿಕ್‌ ಕ್ಲಾಸೆನ್‌ (ವಿ.ಕೀ), ಡೇವಿಡ್‌ ಮಿಲ್ಲರ್‌, ಡೊನೊವಾನ್‌ ಪೆರಾರಿ, ಮಾರ್ಕೊ ಯೆನ್ಸನ್‌, ಜೆರಾಲ್ಡ್‌ ಕೊಡ್ಜಿ, ಒಟ್ಟಿನೀಲ್‌ ಬಾರ್ಟಮನ್‌, ಲುಥೊ ಸಿಪಾಮ್ಲ