Saturday, 14th December 2024

IND-W vs WI-W: ನಾಳೆ ಭಾರತ-ವಿಂಡೀಸ್‌ ಮೊದಲ ಮಹಿಳಾ ಟಿ20

ಮುಂಬಯಿ: ಪ್ರವಾಸಿ ವೆಸ್ಟ್​ ಇಂಡೀಸ್(IND-W vs WI-W)​ ವಿರುದ್ಧದ ಮಹಿಳೆಯರ ಸೀಮಿತ ಓವರ್​ ಕ್ರಿಕೆಟ್​ ಸರಣಿ ನಾಳೆಯಿಂದ(ಭಾನುವಾರ) ಆರಂಭವಾಗಲಿದೆ. ಮುಂಬೈನಲ್ಲಿ 3 ಪಂದ್ಯಗಳ ಟಿ20 ಸರಣಿ (ಡಿ.15, 17, 19 ನಡೆಯುವುದರೊಂದಿಗೆ ಭಾರತ-ವಿಂಡೀಸ್​ ಸರಣಿ ಶುರುವಾಗಲಿದ್ದು, ಡಿಸೆಂಬರ್​ 22, 24, 27ರಂದು ವಡೋದರದಲ್ಲಿ ಏಕದಿನ ಸರಣಿಯ 3 ಪಂದ್ಯಗಳು ನಡೆಯಲಿವೆ.

ಯುವ ಆಟಗಾರ್ತಿಯರಾದ ಪ್ರತಿಕಾ ರಾವಲ್​ ಮತ್ತು ತನುಜಾ ಕನ್ವರ್​ ಭಾರತದ ಏಕದಿನ ತಂಡದಲ್ಲಿ ಮೊದಲ ಬಾರಿ ಸ್ಥಾನ ಸಂಪಾದಿಸಿದ್ದಾರೆ. ಟಿ20 ತಂಡದಲ್ಲಿ ಆಲ್ರೌಂಡರ್​ ರಾಘ್ವಿ ಬಿಷ್ಟ್​ ಮತ್ತು ನಂದಿನಿ ಕಶ್ಯಪ್​ ರಾಷ್ಟ್ರೀಯ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.

ಕಳೆದ ಆಸ್ಟ್ರೆಲಿಯಾ ಪ್ರವಾಸದ ಏಕದಿನ ಸರಣಿಯಿಂದ ಹೊರಬಿದ್ದಿದ್ದ ಶೆಫಾಲಿ ವರ್ಮ ಟಿ20 ಸರಣಿಗೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ರನ್​ಬರದಿಂದಾಗಿ ಶೆಫಾಲಿಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ. ಯಸ್ತಿಕಾ ಭಾಟಿಯಾ, ಪ್ರಿಯಾ ಪೂನಿಯಾ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್​ ಗಾಯದಿಂದಾಗಿ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿಲ್ಲ.

ಇದನ್ನೂ ಓದಿ IND vs AUS: ಆಸೀಸ್‌ ವಿರುದ್ಧ ವಿಶೇಷ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಟಿ20 ತಂಡ: ಹರ್ಮಾನ್​ಪ್ರೀತ್​ ಕೌರ್​ (ನಾಯಕಿ), ಸ್ಮೃತಿ ಮಂದನಾ (ಉಪನಾಯಕಿ), ನಂದಿನಿ ಕಶ್ಯಪ್​, ಜೆಮೀಮಾ ರೋಡ್ರಿಗಸ್​, ರಿಚಾ ಘೋಷ್​ (ವಿ.ಕೀ), ಉಮಾ ಛೇಟ್ರಿ (ವಿ.ಕೀ), ದೀಪ್ತಿ ಶರ್ಮ, ಸಜನಾ ಸಜೀವನ್​, ರಾಘ್ವಿ ಬಿಷ್ಟ್​, ರೇಣುಕಾ ಸಿಂಗ್​, ಪ್ರಿಯಾ ಮಿಶ್ರಾ, ಟಿಟಾಸ್​ ಸಾಧು, ಸೈಮಾ ಠಾಕೂರ್​, ಮಿನ್ನು ಮಣಿ, ರಾಧಾ ಯಾದವ್​.

ಏಕದಿನ ತಂಡ: ಹರ್ಮಾನ್​ಪ್ರೀತ್​ ಕೌರ್​ (ನಾಯಕಿ), ಸ್ಮೃತಿ ಮಂದನಾ (ಉಪನಾಯಕಿ), ಪ್ರತಿಕಾ ರಾವಲ್​, ಜೆಮೀಮಾ ರೋಡ್ರಿಗಸ್​, ಹರ್ಲೀನ್​ ಡಿಯೋಲ್​, ರಿಚಾ ಘೋಷ್​ (ವಿ.ಕೀ), ಉಮಾ ಛೇಟ್ರಿ (ವಿ.ಕೀ), ತೇಜಲ್​ ಹಸಬ್ನಿಸ್​, ದೀಪ್ತಿ ಶರ್ಮ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್​, ಟಿಟಾಸ್​ ಸಾಧು, ಸೈಮಾ ಠಾಕೂರ್​, ರೇಣುಕಾ ಸಿಂಗ್​.