Thursday, 12th December 2024

ಟೀಮ್ ಇಂಡಿಯಾವನ್ನು ಅಭಿನಂದಿಸಿದ ಗೃಹ ಸಚಿವ ಅಮಿತ್ ಶಾ

ಮೇಲ್ಬರ್ನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರೋಹಿತ್ ಪಡೆ ಭರ್ಜರಿ ಗೆಲುವು ಸಾಧಿಸಿದೆ.

ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ (82*; 53 ಎಸೆತಗಳಲ್ಲಿ 6×4, 4×6) ಅಜೇಯ ಅರ್ಧಶತಕದೊಂದಿಗೆ ಐಸಿಸಿ T20 ವಿಶ್ವಕಪ್ 2022ರ ಮೊದಲ ಸೂಪರ್ 12 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಶುಭಾರಂಭ ಮಾಡಿದೆ.

ಪಂದ್ಯವನ್ನು ಗೆದ್ದ ನಂತರ, ದೇಶದ ಗೃಹ ಸಚಿವ ಅಮಿತ್ ಶಾ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದಾರೆ.

ಟಿ 20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ನೀಡಿದೆ. ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಈ ಗೆಲುವಿಗಾಗಿ ಟೀಮ್ ಇಂಡಿಯಾಗೆ ಅಭಿನಂದನೆಗಳು ಎಂದಿದ್ದಾರೆ.