ವಿಶಾಖಪಟ್ಟಣಂ: ಟೀಂ ಇಂಡಿಯಾ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ.
ವಿಶಾಖಪಟ್ಟಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಪೇರಿಸಿದ್ದು ದಕ್ಷಿಣ ಆಫ್ರಿಕಾಗೆ 180 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 131 ರನ್ ಗಳಿಗೆ ಆಲೌಟ್ ಆಗಿದ್ದು 48 ರನ್ ಗಳಿಂದ ಸೋಲು ಕಂಡಿದೆ.
ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್ ಮಾಡಿದ್ದ ತೆಂಬಾ ಬವುಮಾ 8, ರೀಜಾ ಹೆಂಡ್ರಿಕ್ಸ್ 23, ಡ್ವೈನ್ ಪ್ರಿಟೋರಿಯಸ್ 20, ಹೆನ್ರಿಚ್ ಕ್ಲಾಸೆನ್ 29, ಪರ್ಲೆನ್ ಅಜೇಯ 22 ರನ್ ಬಾರಿಸಿದ್ದಾರೆ. ಟೀಂ ಇಂಡಿಯಾ ಪರ ಹರ್ಷಲ್ ಪಟೇಲ್ 4, ಯಜುವೇಂದ್ರ ಚಹಾಲ್ 3, ಭುವನೇಶ್ವರ್ ಕುಮಾರ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಟೀಂ ಇಂಡಿಯಾ ಪರ ರಿತುರಾಜ್ ಗಾಯಕ್ವಾಡ್ 57, ಇಶಾನ್ ಕಿಶನ್ 54, ಶ್ರೇಯಸ್ ಅಯ್ಯರ್ 14, ಹಾರ್ದಿಕ್ ಪಾಂಡ್ಯ ಅಜೇಯ 31 ರನ್ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಬೌಲಿಂಗ್ ನಲ್ಲಿ ಡ್ವೈನ್ ಪ್ರಿಟೋರಿ ಯಸ್ 2, ರಬಾಡಾ, ಶಮ್ಸಿ ಮತ್ತು ಕೇಶವ್ ಮಹಾರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ.
ಸರಣಿ ಗೆಲುವಿಗೆ ಡು ಆರ್ ಡೈ ಸ್ಥಿತಿಯಲ್ಲಿ ಸಿಲುಕಿರುವ ಆತಿಥೇಯ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 48 ರನ್ಗಳಿಂದ ಮಣಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ಎದುರು ಭಾರತ, 5 ಪಂದ್ಯಗಳ ಚುಟುಕು ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿಕೊಂಡಿತು.
ಸತತ 3ನೇ ಪಂದ್ಯದಲ್ಲಿ ಟಾಸ್ ಸೋತರೂ ಗೆಲುವಿನ ನಗೆ ಬೀರಿದ ರಿಷಭ್ ಪಂತ್ ಪಡೆ, ಸರಣಿಯಲ್ಲಿ ತನ್ನ ಹೋರಾಟವನ್ನು ಜೀವಂತ ವಾಗಿರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕರಾದ ಋತುರಾಜ್ ಗಾಯಕ್ವಾಡ್ (57 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಇಶಾನ್ ಕಿಶನ್ (54 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 179 ರನ್ಗಳಿಸಿತು. ಪ್ರತಿಯಾಗಿ ಯಜುವೇಂದ್ರ ಚಾಹಲ್ (20ಕ್ಕೆ 3) ಹಾಗೂ ಹರ್ಷಲ್ ಪಟೇಲ್ (25ಕ್ಕೆ 4) ಮಾರಕ ದಾಳಿಗೆ ನಲುಗಿದ ದ. ಆಫ್ರಿಕಾ 19.1 ಓವರ್ಗಳಲ್ಲಿ 131 ರನ್ಗಳಿಗೆ ಸರ್ವಪತನ ಕಂಡಿತು.
ಭಾರತ: 5 ವಿಕೆಟ್ಗೆ 179 (ಋತುರಾಜ್ ಗಾಯಕ್ವಾಡ್ 57, ಇಶಾನ್ ಕಿಶನ್ 54, ಹಾರ್ದಿಕ್ ಪಾಂಡ್ಯ 31*, ಡ್ವೇನ್ ಪ್ರಿಟೋರಿಯಸ್ 29ಕ್ಕೆ 2),
ದಕ್ಷಿಣ ಆಫ್ರಿಕಾ: 19.1 ಓವರ್ಗಳಲ್ಲಿ 131 (ರೀಜಾ ಹೆನ್ಡ್ರೀಕ್ಸ್ 23, ಡ್ವೇನ್ ಪ್ರಿಟೋರಿಯಸ್ 20, ಹೆನ್ರಿಚ್ ಕ್ಲಾಸೆನ್ 29, ವಾಯ್ನೆ ಪಾರ್ನೆಲ್ 22*, ಹರ್ಷಲ್ ಪಟೇಲ್ 25ಕ್ಕೆ 4, ಯಜುವೇಂದ್ರ ಚಾಹಲ್ 20ಕ್ಕೆ 2, ಭುವನೇಶ್ವರ್ ಕುಮಾರ್ 21ಕ್ಕೆ 1, ಅಕ್ಷರ್ ಪಟೇಲ್ 28ಕ್ಕೆ 1).