Friday, 22nd November 2024

ರೋಹಿತ್‌ ಅರ್ಧಶತಕ, ಸ್ಪೋಟಿಸಿದ ಕಾರ್ತಿಕ್‌

ತರೌಬಾ: ಎರಡೂ ವಿಭಾಗಗಳಲ್ಲೂ ಬಲಿಷ್ಠ ನಿರ್ವಹಣೆ ತೋರಿದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ 68 ರನ್‌ಗಳಿಂದ ವೆಸ್ಟ್ ಇಂಡೀಸ್ ಎದುರು ಜಯ ದಾಖಲಿ ಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತು.

ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿದ್ದ ಭಾರತ ತಂಡ ಇದೀಗ ಚುಟುಕು ಕ್ರಿಕೆಟ್ ಸರಣಿಯಲ್ಲೂ ಭರ್ಜರಿ ಆರಂಭ ಕಂಡಿದೆ. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್‌ಗೆ 190 ರನ್ ಕಲೆ ಹಾಕಿತು.

ನಾಯಕ ರೋಹಿತ್ ಶರ್ಮ (64ರನ್) ಆರಂಭಿಕ ಹಂತದಲ್ಲಿ ತೋರಿದ ಬಿರುಸಿನ ಬ್ಯಾಟಿಂಗ್ ಹಾಗೂ ಅನುಭವಿ ದಿನೇಶ್ ಕಾರ್ತಿಕ್ (41*ರನ್) ಸ್ಲಾಗ್ ಓವರ್‌ನಲ್ಲಿ ತೋರಿದ ಸ್ಫೋಟಕ ನಿರ್ವಹಣೆಯಿಂದ ಬೃಹತ್ ಸವಾಲು ನೀಡಿತು. ಬಳಿಕ ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ರನ್‌ಗಳಿಸಲು ಪರದಾಡಿದ ವೆಸ್ಟ್ ಇಂಡೀಸ್ 8 ವಿಕೆಟ್‌ಗೆ 122 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತ: 6 ವಿಕೆಟ್‌ಗೆ 190 (ರೋಹಿತ್ ಶರ್ಮ 64, ಸೂರ್ಯಕುಮಾರ್ ಯಾದವ್ 24, ದಿನೇಶ್ ಕಾರ್ತಿಕ್ 41*, ಅಲ್ಜಾರಿ ಜೋಸ್ೆ 46ಕ್ಕೆ 2, ಅಕೀಲ್ ಹೊಸೈನ್ 14ಕ್ಕೆ1),

ವೆಸ್ಟ್ ಇಂಡೀಸ್: 8 ವಿಕೆಟ್‌ಗೆ 122 (ಶಾಮರ ಬ್ರೂಕ್ಸ್ 20, ನಿಕೋಲಸ್ ಪೂರನ್ 18, ಅರ್ಷದೀಪ್ ಸಿಂಗ್ 24ಕ್ಕೆ 2, ಆರ್.ಅಶ್ವಿನ್ 22ಕ್ಕೆ 2, ರವಿ ಬಿಷ್ಣೋಯಿ 26ಕ್ಕೆ 2).