ಕೊಲಂಬೊ: ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿತು.
ಇತ್ತೀಚಿನ ವರದಿ ಪ್ರಕಾರ, ಭಾರತ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದೆ. ಆರಂಭಿಕ ಪೃಥ್ವಿ ಶಾ ಹಾಗೂ ವಿಕೆಟ್ ಕೀಪರ್ ಸಂಜೂ ಸ್ಯಾಮ್ಸನ್ ತಲಾ 49 ಹಾಗೂ 46 ರನ್ ಗಳಿಸಿ, ಔಟಾದರು. ಉಳಿದಂತೆ, ಸೂರ್ಯ ಕುಮಾರ್ ಯಾದವ್ 34 ರನ್ ಗಳಿಸಿ, ಆಟ ಮುಂದುವರಿಸಿದ್ದಾರೆ.
ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಭಾರತ ಆರು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಸಿತ್ತು. ಇಶಾನ್ ಕಿಶನ್, ಕೃಣಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಬದಲು ಸಂಜೂ ಸ್ಯಾಮ್ಸನ್, ನಿತೀಶ್ ರಾಣಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ ಹಾಗೂ ಚೇತನ್ ಸಕಾರಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಲಂಕಾ ತಂಡದ ಪರ ಪ್ರವೀಣ ಜಯವಿಕ್ರಮ ಮೂರು ವಿಕೆಟ್ ಕಿತ್ತರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಈಗಾಗಲೇ ಜಯಿಸುವ ಮೂಲಕ ಭಾರತವು ಸರಣಿ ತನ್ನದಾಗಿಸಿಕೊಂಡಿದೆ.