ಚೆನ್ನೈ: ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಾಯಕ ವಿರಾಟ್ ಕೊಹ್ಲಿ ಸಹಿತ ಮೂರು ವಿಕೆಟ್ ಕಳೆದುಕೊಂಡಿದೆ.
ತಂಡದ ರನ್ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡ ಭಾರತ, ಬಳಿಕ ಪೂಜಾರ ಮತ್ತು ಇತ್ತೀಚಿನ ವರದಿ ಪ್ರಕಾರ, ನಾಯಕ ವಿರಾಟ್ ಕೊಹ್ಲಿ ಕೂಡ ರನ್ ಗಳಿಸದೆ, ಸ್ಪಿನ್ನರ್ ಮೊಯಿನ್ ಅಲಿಗೆ ಬೌಲ್ಡ್ ಆದರು.
ಪಂದ್ಯದ ದ್ವಿತೀಯ ಓವರ್ ನಲ್ಲಿ ಶುಭಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆರಂಭಿಕ ರೋಹಿತ್ ಶರ್ಮಾ ಅರ್ಧಶತಕ (ಅಜೇಯ 65) ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಭಾರತ ತಂಡ ಮೂರು ಹಾಗೂ ಇಂಗ್ಲೆಂಡ್ ತಂಡ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.