Sunday, 8th September 2024

ಭಾರತಕ್ಕಿಂದು ನಮೀಬಿಯಾ ಎದುರು ಔಪಚಾರಿಕ ಪಂದ್ಯ

ದುಬೈ: ಭಾರತಕ್ಕೆ ನಮೀಬಿಯಾ ವಿರುದ್ಧದ ಪಂದ್ಯ ಗೆದ್ದರೂ ಸೋತರು ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಪ್ರಮುಖರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯದ ಆಟಗಾರರಿಗೆ ಅವಕಾಶ ನೀಡುವ ಸಂಭವವಿದೆ.

ಐಸಿಸಿ ಟಿ20 ವಿಶ್ವಕಪ್​ನ ಆರಂಭದ ಎರಡು ಪಂದ್ಯಗಳಲ್ಲಿ ಸೋಲುಂಡ ಪರಿಣಾಮ ಭಾರತ ಟೂರ್ನಿಯಿಂದಲೇ ಹೊರಬಿದ್ದಿದೆ.

ಟೀಮ್ ಇಂಡಿಯಾ ಸೋಮವಾರ ನಮೀಬಿಯಾ ವಿರುದ್ಧ ಔಪಚಾರಿಕ ಪಂದ್ಯವಾಡ ಲಿದೆ. ಕೊನೆಯ ಪಂದ್ಯವಾಗಿದ್ದು, ಈ ಮೂಲಕ ವಿಶ್ವಕಪ್ ಅಭಿಯಾನವನ್ನು ಅಂತ್ಯ ಗೊಳಿಸಲಿದೆ. ಜೊತೆಗೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿಯ ಯುಗ ಹಾಗೂ ಕೋಚ್ ರವಿಶಾಸ್ತ್ರಿ ಯುಗವೂ ಮುಕ್ತಾಯ ಕಾಣಲಿದೆ. ಕನಿಷ್ಠ ನಮೀಬಿಯಾ ವಿರುದ್ಧ ಜಯ ಸಾಧಿಸಿ ಕೊಹ್ಲಿಗೆ ಗೆಲುವಿನ ಅರ್ಪಣೆ ಮಾಡಲು ಟೀಮ್ ಇಂಡಿಯಾ ಯೋಜನೆ ರೂಪಿಸಿಕೊಂಡಿದೆ.

ಪ್ರಮುಖರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯದ ಆಟಗಾರರಿಗೆ ಅವಕಾಶ ನೀಡುವ ಸಂಭವ ವಿದೆ. ಇಶಾನ್ ಕಿಶನ್, ರಾಹುಲ್ ಚಹಾರ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್​ನ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಈಗಾಗಲೆ ಘೋಷಿಸಿರುವುದರಿಂದ ನಮೀಬಿಯ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಇದು ಕೊನೆಯ ಟಿ20 ಪಂದ್ಯವಾಗಿರಲಿದೆ. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಆಡಿದ 49 ಟಿ20 ಪಂದ್ಯಗಳಲ್ಲಿ ಭಾರತ 29ರಲ್ಲಿ ಗೆದ್ದಿದ್ದು, 16ರಲ್ಲಿ ಸೋತಿದೆ. 2 ಟೈ ಆಗಿದ್ದರೆ, 2 ಪಂದ್ಯ ರದ್ದುಗೊಂಡಿದೆ.

2014ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ನೇಮಕಗೊಂಡಿದ್ದ ರವಿಶಾಸ್ತ್ರಿ 2015ರ ಏಕದಿನ ವಿಶ್ವಕಪ್‌ವರೆಗೆ ಹುದ್ದೆಯಲ್ಲಿ ದ್ದರು. 2019ರ ಆಗಸ್ಟ್‌ನಲ್ಲಿ ಮರುನೇಮಕಗೊಂಡಿದ್ದರು. 

Leave a Reply

Your email address will not be published. Required fields are marked *

error: Content is protected !!