Friday, 22nd November 2024

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

ದುಬೈ: ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ರ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ಮುಖಾಮುಖಿಯಾಗಲಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಪಡೆ, ವಿರಾಟ್‌ ನಾಯ ಕತ್ವದ ಟೀಂ ಇಂಡಿಯಾವನ್ನು ಎದುರಿಸಲಿದೆ.

ಐಸಿಸಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ನಂಬರ್ 2ನೇ ಸ್ಥಾನದಲ್ಲಿದ್ದರೇ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಹೀಗಾಗಿ ಭಾರತೀಯ ಬೌಲರ್‌ ಗಳು ಇವರ ವಿಕೆಟ್‌ ಕಬಳಿಸಲು ಸರ್ವ ಸನ್ನದ್ದರಾಗಿದ್ದಾರೆ.

ಟಿ೨೦ ಟ್ವೆಂಟಿ ಕ್ರಿಕೆಟ್ ನಲ್ಲಿ 61 ಪಂದ್ಯಗಳಾಡಿರುವ ಬಾಬರ್ ಅಜಮ್ 2204 ರನ್ ಗಳಿಸಿದ್ದು, 20 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದಾರೆ. ಇವರು ಪಾಕಿಸ್ತಾನ ತಂಡದ ಬೆನ್ನೆಲುಬಾಗಿದ್ದಾರೆ.

ತಂಡ ಇಂತಿದೆ.

ಭಾರತ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ(ನಾ), ಸೂರ್ಯ ಕುಮಾರ್‌ ಯಾದವ್, ರಿಷಬ್ ಪಂತ್(ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್/ರಾಹುಲ್ ಚಹರ್‌, ಭುವನೇಶ್ವರ ಕುಮಾರ್‌/ಶಾರ್ದೂಲ್ ಠಾಕೂರ್‌, ಮೊಹಮ್ಮದ್ ಶಮಿ, ಬೂಮ್ರಾ.

ಪಾಕಿಸ್ತಾನ: ಬಾಬರ್‌ ಅಜಂ (ನಾ), ಎಂ.ರಿಜ್ವಾನ್ (ಕೀ), ಫಖರ್‌ ಜಮಾನ್‌, ಮೊಹಮ್ಮದ್ ಹಫೀಜ್, ಎಸ್.ಮಲಿಕ್/ಹೈದರ್‌ ಅಲಿ, ಆಸಿಫ್‌ ಅಲಿ, ಇಮಾದ್ ವಾಸಿಮ್, ಶಬಾದ್ ಖಾನ್, ಹಸನ್‌ ಅಲಿ, ಹ್ಯಾರಿಸ್ ರೌಫ್, ಶಹೀನ್ ಅಫ್ರಿದಿ.