Thursday, 12th December 2024

ಟೋಕಿಯೊ ಒಲಿಂಪಿಕ್ಸ್‌ ಹಾಕಿ: ಮೊದಲ ಪಂದ್ಯ ಗೆದ್ದ ಭಾರತದ ಮಹಿಳಾ ತಂಡ

ಟೋಕಿಯೊ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿರುವ ಭಾರತದ ಮಹಿಳಾ ಹಾಕಿ ತಂಡವು, ಐರ್ಲೆಂಡ್ ವಿರುದ್ಧ 1-0 ಗೋಲುಗಳ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ.

‘ಎ’ ಗುಂಪಿನಲ್ಲಿ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿರುವ ಭಾರತಕ್ಕೆ ಈ ಗೆಲುವು ಅನಿವಾರ್ಯವೆನಿಸಿತ್ತು. 57ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲಾಗಿ ಪರಿವರ್ತಿಸುವ ಮೂಲಕ ಭಾರತೀಯರಲ್ಲಿ ಮಂದಹಾಸ ಮೂಡಿಸಿದರು.

ಈ ಗೆಲುವಿನೊಂದಿಗೆ ಭಾರತ 5ನೇ ಸ್ಥಾನಕ್ಕೇರಿದೆ. ಐರ್ಲೆಂಡ್ ಗೋಲುಗಳ ಲೆಕ್ಕಾಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಾಕೌಟ್ ಹಂತವನ್ನು ಪ್ರವೇಶಿಸಲು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲೂ  ಹಾಗೂ ಇತರೆ ಪಂದ್ಯಗಳ ಫಲಿತಾಂಶಗಳು ತನ್ನ ಪರ ದಾಖಲಾಗುವಂತೆ ಕಾಯಬೇಕಿದೆ.