Sunday, 15th December 2024

ಟೆಸ್ಟ್ ಪಂದ್ಯ: ಆಸೀಸ್‌ಗೆ ಸೋಲು

ವದೆಹಲಿ: ಏಕೈಕ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತವು ಆಸ್ಟ್ರೇಲಿಯಾವನ್ನು ಎಂಟು ವಿಕೆಟ್ ಗಳಿಂದ ಸೋಲಿಸಿತು.

ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದು, 46 ರನ್ನುಗಳ ಮುನ್ನಡೆ ಸಾಧಿಸಿದೆ.

ಆದರೆ ಸ್ಪಿನ್ನರುಗಳಾದ ಸ್ನೇಹ್ ರಾಣಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ವೇಗದ ಬೌಲರ್ ಪೂಜಾ ವಸ್ತ್ರಾಕರ್ ಅವರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ 4ನೇ ದಿನದಾಟದ ಮೊದಲ ಸೆಷನಿನಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 28 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 261 ರನ್ನುಗಳಿಗೆ ಆಲೌಟ್ ಆಗಿ 75 ರನ್ಗಳ ಅಲ್ಪ ಗುರಿಯನ್ನು ಬೆನ್ನಟ್ಟಿತು.

ಭಾರತದ ಪರ ರಾಣಾ 4 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರೆ, ವಸ್ತ್ರಾಕರ್ 11 ಓವರ್ ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು.

ಸ್ಮೃತಿ ಮಂದಾನ (38) ಮತ್ತು ರಿಚಾ ಘೋಷ್ (51 ರನ್ಗಳ ಜೊತೆಯಾಟ) ಭಾರತವನ್ನು ಗೆಲುವಿನ ಸಮೀಪಕ್ಕೆ ತರಲು ಸಹಾಯ ಮಾಡಿದರು. ಗುರಿ ಬೆನ್ನಟ್ಟಿದ ಭಾರತ ಕೇವಲ 18.4 ಓವರುಗಳಲ್ಲಿ ಗುರಿ ತಲುಪಿತು.