ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ವನಿತೆಯರ ತಂಡ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ.
ಮಂಗಳವಾರ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಏಷ್ಯಾಡ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ 23 ರನ್ಗಳ ಗೆಲುವು ಸಾಧಿಸಿದೆ. ನೇಪಾಳ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್ ಆಯ್ದುಕೊಂಡಿತು.
ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ನೇಪಾಳ ಬೌಲರ್ಗಳನ್ನು ಸಮರ್ಥ ವಾಗಿ ಎದುರಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 25 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಮತ್ತೊಬ್ಬ ಸ್ಫೋಟಕ ಆಟಗಾರ ತಿಲಕ್ ವರ್ಮಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ವಿಕೆಟ್ವೊಪ್ಪಿಸಿ ನಿರ್ಗಮಿಸಿದರು. ಅವರು ಕೇವಲ 2 ರನ್ ಮಾತ್ರ ಗಳಿಸಿದ್ದರು.
ವರ್ಮಾ ಔಟಾದ ಬೆನ್ನೆಲ್ಲೇ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 5 ರನ್ ಕಲೆ ಹಾಕಿ ಔಟಾದರು. ಆರಂಭಿಕರಾಗಿ ಭರ್ಜರಿ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್ 48 ಎಸೆತಗಳಲ್ಲಿ ಶತಕ ಬಾರಿಸಿ, ಔಟಾದರು. ಕೊನೆಯಲ್ಲಿ ಶಿವಂ ದುಬೆ 25 ಮತ್ತು ರಿಂಕು ಸಿಂಗ್ 37 ರನ್ ಸಿಡಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು. ಭಾರತ ತಂಡ 20 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 202 ರನ್ಗಳನ್ನು ಕಲೆ ಹಾಕಿತು.
ಭಾರತ ನೀಡಿದ 203 ಗುರಿಯನ್ನು ಬೆನ್ನತ್ತಿದ್ದ ನೇಪಾಳ ಆರಂಭದಿಂದಲೇ ಎಚ್ಚರಿಕೆಯಿಂದ ಕಣಕ್ಕಿಳಿಯಿತು. ಒಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೇ, ಮತ್ತೊಂದು ಕಡೆಯಿಂದ ಸ್ಕೋರ್ ಬೋರ್ಡ್ಗಳಲ್ಲಿ ರನ್ಗಳ ಹೊಳೆಯೇ ಹರಿದು ಬರುತ್ತಿತ್ತು.
ಭಾರತದ ಪರ ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ತಲಾ ಮೂರು ವಿಕೆಟ್, ಅರ್ಶ್ದೀಪ್ ಸಿಂಗ್ 2 ವಿಕೆಟ್ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ 1 ವಿಕೆಟ್ ಪಡೆದು ಮಿಂಚಿದರು.
ಏಷ್ಯನ್ ಗೇಮ್ಸ್ಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದು ಕೊಂಡಿವೆ. ನೇಪಾಳ, ಹಾಂಕಾಂಗ್ ಮತ್ತು ಮಲೇಷ್ಯಾ ತಂಡಗಳು ಅರ್ಹತಾ ಹಂತದ ಪಂದ್ಯಗಳನ್ನಾಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದು ಕೊಂಡಿವೆ.
ಯಶಸ್ವಿ ಜೈಸ್ವಾಲ್ ಇತಿಹಾಸ: ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಏಷ್ಯನ್ ಗೇಮ್ಸ್ 2023 ಕ್ರಿಕೆಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪುರುಷರ ಕ್ರಿಕೆಟ್‌ನ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ, ಜೈಸ್ವಾಲ್ 48 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಬಾರಿಸಿ ಶತಕ ಪೂರೈಸಿದರು.