ಟೋಕಿಯೋ: ಭಾರತದ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್ ಟೋಕಿಯೋದಲ್ಲಿ ತರಬೇತಿ ಆರಂಭಿಸಿದ್ದಾರೆ.
ಭಾನುವಾರ ಭಾರತದ ಮೊದಲ ಒಲಿಂಪಿಕ್ಸ್ ಬ್ಯಾಚ್ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್ನಲ್ಲಿದ್ದ ಭಾರತದ ಈ ಇಬ್ಬರು ಸ್ಟಾರ್ ಆರ್ಚರಿ ಆಟಗಾರರು ಇದೀಗ ತರಬೇತಿಗೆ ಅಣಿಯಾಗಿದ್ದಾರೆ.
ಆಟಗಾರರೆಲ್ಲ ಪ್ರಸ್ತುತ ಜಪಾನ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿದ್ದಾರೆ. 88 ಆಟಗಾರರಿದ್ದ ಈ ಬ್ಯಾಚ್ನ ಪ್ರತಿಯೊಬ್ಬ ಸದಸ್ಯರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ 5 ವಿಭಾಗಗಳಲ್ಲಿ ಆರ್ಚರಿ ಪಂದ್ಯ ನಡೆಯಲಿದೆ.
ಪುರುಷರ ವಿಭಾಗ, ಮಹಿಳೆಯ ವಿಭಾಗ, ಪುರುಷರ ಗುಂಪು, ಮಹಿಳೆಯರ ಗುಂಪು ಹಾಗೂ ಮಿಶ್ರ ಡಬಲ್ಸ್ನಲ್ಲಿ ಈ ಆರ್ಚರಿ ಪಂದ್ಯ ನಡೆಯಲಿದೆ. ಜುಲೈ 23ರಿಂದ ಯುಮೆನೋಶಿಮಾ ಪಾರ್ಕ್ನ ಆರ್ಚರಿ ಮೈದಾನದಲ್ಲಿ ಆರಂಭವಾಗುವ ಈ ಪಂದ್ಯಗಳು ಜು.31ರವರೆಗೂ ನಡೆಯಲಿದೆ. ಆರ್ಚರಿ ವಿಭಾಗದಲ್ಲಿ ಭಾರತ ಇಲ್ಲಿಯ ವರೆಗೂ ಒಲಿಂಪಿಕ್ಸ್ ಪದಕವನ್ನ ಸಂಪಾದಿಸಿಲ್ಲ.