Sunday, 8th September 2024

Indian Premier League : ಐಪಿಎಲ್ ಉದ್ಯಮ ಮೌಲ್ಯ ಕುಸಿತ; ಮಹಿಳಾ ಪ್ರೀಮಿಯರ್ ಲೀಗ್‌ನ ಮೌಲ್ಯ ಏರಿಕೆ!

indian Premier League

ಬೆಂಗಳೂರು: ಐಪಿಎಲ್‌ (Indian Premier League) ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಾ ಹೋಗುತ್ತಿದೆ. ಆದಾಗ್ಯೂ ಅದರ ಮೌಲ್ಯದಲ್ಲಿ ಕುಸಿತ ಕಂಡಿದೆ. ಕನ್ಸಲ್ಟಿಂಗ್ ಮತ್ತು ಮೌಲ್ಯಮಾಪನ ಸೇವೆಗಳನ್ನು ಒದಗಿಸುವ ಡಿ & ಪಿ ಅಡ್ವೈಸರಿ ಸಂಸ್ಥೆಯು ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಮೌಲ್ಯಮಾಪನ ವರದಿಯಾದ ”ಬಿಯಾಂಡ್ 22 ಯಾರ್ಡ್ಸ್ 2024 – ಐಪಿಎಲ್‌ ಲೆಗಸಿ ಆಂಡ್‌ ಡಬ್ಲ್ಯುಪಿಎಲ್‌ ವಿಷನ್” ಅನ್ನು ಬುಧವಾರ ಬಿಡುಗಡೆ ಮಾಡಿದೆ. ಅದರ ಪ್ರಕಾರ ಎರಡನೇ ಋತುವಿನಲ್ಲಿ, ವಿಮೆನ್ಸ್ ಪ್ರೀಮಿಯರ್ ಲೀಗ್‌ ಗಮನಾರ್ಹ ಬೆಳವಣಿಗೆ ಮತ್ತು ಬೆಂಬಲವನ್ನು ಪಡೆದಿದೆ. ಇದೇ ವೇಳೆ ಕಳೆದ ಆವೃತ್ತಿಯ ಐಪಿಎಲ್‌ ಅಭೂತಪೂರ್ವ ರನ್‌ಗಳಿಗೆ ಸಾಕ್ಷಿಯಾಗಿದೆ. ಹಿಂದಿನ ಎಲ್ಲ ಗರಿಷ್ಠ ಸ್ಕೋರ್‌ಗಳ ದಾಲೆ ಮುರಿದಿದೆ. ಐಪಿಎಲ್‌ನ ಒಂದೇ ಪಂದ್ಯದಲ್ಲಿ 500 ಕ್ಕೂ ಹೆಚ್ಚು ರನ್ ಕೂಡಿಕೆಯಾಗಿತ್ತು. ಆದರೆ, ವರದಿಯಲ್ಲಿ ಐಪಿಎ ವ್ಯವಹಾರ ಉದ್ಯಮ ಮೌಲ್ಯವು ಕಳೆದ ವರ್ಷದ 11.2 ಬಿಲಿಯನ್ ಯುಎಸ್ ಡಾಲರ್‌ನಿಂದ (92 ಸಾವಿರ ಕೋಟಿ ರೂಪಾಯಿ) 9.9 ಬಿಲಿಯನ್ ಯುಎಸ್ ಡಾಲರ್‌ಗೆ (82 ಸಾವಿರ ಕೋಟಿ ರೂಪಾಯಿ) ಇಳಿದಿದೆ ಎಂದು ವರದಿ ಮಾಡಿದೆ. ಅಂದರೆ ಸರಿಸುಮಾರು 11.7% ನಷ್ಟು ಇಳಿಕೆ ಕಂಡಿದೆ.

ಮೌಲ್ಯದ ಕುಸಿತವು ಮಾಧ್ಯಮ ಹಕ್ಕುಗಳ ಮರು ಮೌಲ್ಯಮಾಪನದಿಂದ ಉಂಟಾಗಿದೆ. ಡಿ & ಪಿ ಅಡ್ವೈಸರಿಯ ಹಿಂದಿನ ವರದಿಯು ಮಾಧ್ಯಮ ಹಕ್ಕುಗಳ ಮೌಲ್ಯಮಾಪನವನ್ನು ಅಪ್‌ಡೇಟ್‌ ಮಾಡಿದಾಗ ಕೆಲವು ಊಹೆಗಳಿಗೆ ಕಾರಣವಾಗಿತ್ತು. ಆದರೆ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಮುಂದಿನ ಐಪಿಎಲ್ ಹರಾಜಿನಲ್ಲಿ ಕಡಿಮೆ ಪ್ರತಿಸ್ಪರ್ಧಿಗಳ ಕಾರಣಕ್ಕೆ ಮೌಲ್ಯದ ಕುಸಿತ ಅನುಭವಿಸಿದೆ.

ಡಬ್ಲ್ಯುಪಿಎಲ್‌ನ ಉದ್ಘಾಟನಾ ಆವೃತ್ತಿಯ ಮೌಲ್ಯ 150 ಮಿಲಿಯನ್ ಡಾಲರ್‌ ಆಗಿತ್ತು. ನಂತರ ಉದ್ಯಮ ಮೌಲ್ಯವು 160 ಮಿಲಿಯನ್ ಡಾಲರ್‌ಗೆ ಹೆಚ್ಚಾಗಿದೆ. ಹೀಗಾಗಿ ಸುಮಾರು 8% ಹೆಚ್ಚಳ ಕಂಡಿದೆ. ಸಮೀಕ್ಷೆಯಲ್ಲಿ ವರ್ಷವೂ ಮುಂಬೈ ಇಂಡಿಯನ್ಸ್, 2024 ರಲ್ಲಿ ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ನಂತರದ ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನದಾಗಿಸಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Ravindra Jadeja : ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ವರದಿಯ ಪ್ರಕಾರ, ಕಳೆದ ಆವೃತ್ತಿಗೆ ಹೋಲಿಸಿದರೆ, ಐಪಿಎಲ್ ಇಕೊ ಸಿಸ್ಟಮ್‌ ಮೌಲ್ಯವು 92,500 ಕೋಟಿ ರೂ.ಗಳಿಂದ 82,700 ಕೋಟಿ ರೂ.ಗೆ ಇಳಿದಿದೆ, ಇದು ಸುಮಾರು 10.6% ನಷ್ಟು ಕುಸಿತ ಕಂಡಿದೆ. ಅಮೆರಿಕ ಡಾಲರ್‌ ಲೆಕ್ಕದಲ್ಲಿ, ಇದು 11.2 ಬಿಲಿಯನ್ ಡಾಲರ್‌ನಿಂದ 9.9 ಬಿಲಿಯನ್ ಡಾಲರ್‌ಗೆ ಇಳಿದಿದೆ. ಇದು ಸರಿಸುಮಾರು 11.7% ನಷ್ಟು ಇಳಿಕೆಯನ್ನು ತೋರಿಸುತ್ತದೆ. ದೂರದರ್ಶನ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಜನರನ್ನು ಆಕರ್ಷಿಸುತ್ತಲೇ ಇರುವ ನಡುವೆಯೂ ಈ ಕುಸಿತ ಅಚ್ಚರಿಯಾಗಿದೆ.

ಪ್ರಸಾರ ಹಕ್ಕುಗಳಲ್ಲಿ ಪೈಪೋಟಿಯ ಕೊರತೆಯು ಐಪಿಎಲ್ ಮಾಧ್ಯಮ ಹಕ್ಕುಗಳ ಬಿಡ್ಡಿಂಡ್‌ನಲ್ಲಿ ಆಕರ್ಷಣೆಯ ಕೊರತೆಗೆ ಕಾರಣವಾಗಿದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ, ಡಬ್ಲ್ಯುಪಿಎಲ್ ಇಕೊ ಸಿಸ್ಟಮ್‌ ಮೌಲ್ಯವು 1,250 ಕೋಟಿ ರೂ.ಗಳಿಂದ 1,350 ಕೋಟಿ ರೂ.ಗೆ ಏರಿದೆ. ಇದು 8.0% ಹೆಚ್ಚಳ ಸೂಚಿಸುತ್ತದೆ. ಅಮೆರಿಕದ ಡಾಲರ್‌ ಇದು 150 ಮಿಲಿಯನ್ ಡಾಲರ್‌ನಿಂದ 160 ಮಿಲಿಯನ್ ಡಾಲರ್‌ಗೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *

error: Content is protected !!