Thursday, 12th December 2024

ಹೀರೋ ಇಂಡಿಯನ್ ಸೂಪರ್ ಲೀಗ್‌: ಇಂದು ಈಸ್ಟ್ ಬೆಂಗಾಲ್-ಒಡಿಶಾ ಎಫ್‌ಸಿ ಮುಖಾಮುಖಿ

ಪಣಜಿ (ಗೋವಾ): ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೆದ್ದಿರುವ ಈಸ್ಟ್ ಬೆಂಗಾಲ್ ಮತ್ತು ಒಡಿಶಾ ಎಫ್‌ಸಿ ತಂಡಗಳು ಭಾನುವಾರ ತಿಲಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.

ಈಸ್ಟ್ ಬೆಂಗಾಲ್ ಮತ್ತು ಒಡಿಶಾ ತಂಡ ರಕ್ಷಣಾತ್ಮಕವಾಗಿ ಆಡುವಾಗ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಎರಡೂ ತಂಡಗಳು ಗಳಿಸಿರುವುದು ಕೇವಲ 5 ಗೋಲುಗಳು ಮಾತ್ರ.

ಈಸ್ಟ್ ಬೆಂಗಾಲ್ ಅತಿ ಹೆಚ್ಚು ಅಂದರೆ ೧೩ ಗೋಲುಗಳನ್ನು ದಾಖಲಿಸಿದರೆ ಒಡಿಶಾ ತಂಡ ತಂಡ 11 ಗೋಲುಗಳನ್ನು ದಾಖಲಿ ಸುವುದರ ಮೂಲಕ ಕೇರಳ ಬ್ಲಾಸ್ಟರ್ಸ್‌ನೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದೆ. ಈಸ್ಟ್ ಬೆಂಗಾಲ ತಂಡ ಆಡಿದ ಮೊದಲ 4 ಪಂದ್ಯಗಳಲ್ಲಿ 5 ಗೋಲು ದಾಖಲಿಸಿದೆ. ಹಾಗೆಯೇ 3 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಭಾನುವಾರದ ಪಂದ್ಯದಲ್ಲಿ ನಮ್ಮ ತಂಡ ಎಚ್ಚರಿಕೆಯಿಂದ ಆಟವಾಡುವ ಭರವಸೆಯನ್ನು ಈಸ್ಟ್ ಬೆಂಗಾಲ್ ತಂಡದ ಕೋಚ್ ಫೋರ್ ನೀಡಿದ್ದಾರೆ. ಆದರೆ ವಿರಾಮದ ಬಳಿ ನಮ್ಮ ತಂಡ 10 ಗೋಲುಗಳನ್ನು ಬಿಟ್ಟು ಕೊಟ್ಟಿರುವುದು ತಲೆ ನೋವಿನ ಸಂಗತಿ ಎಂದಿದ್ದಾರೆ.