Friday, 22nd November 2024

IND vs BAN : ಟೆಸ್ಟ್‌ನಲ್ಲಿ ಅತಿ ವೇಗದ ಶತಕ; ಭಾರತ ತಂಡದಿಂದ ವಿಶ್ವ ದಾಖಲೆ

INDvsBAN

ಬೆಂಗಳೂರು: ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಪ್ರವಾಸಿ ತಂಡವು 233 ರನ್‌ಗಳಿಗೆ ಆಲೌಟ್ ಆಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಒದ್ದೆಯಾದ ಔಟ್ ಫೀಲ್ಡ್ ನಿಂದಾಗಿ 2 ಮತ್ತು 3 ನೇ ದಿನವನ್ನು ರದ್ದುಪಡಿಸಲಾಗಿತ್ತು. ಆದಾಗ್ಯೂ ನಾಲ್ಕನೇ ದಿನ ಆಟಕ್ಕೆ ಅವಕಾಶ ಸಿಕ್ಕಿತ್ತು. ಅಂತೆಯೇ ಮೊದಲ ಇನಿಂಗ್ಸ್‌ ಬ್ಯಾಟ್ ಮಾಡಿದ ಭಾರತ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಅಬ್ಬರದ ಪ್ರದರ್ಶನ ನೀಡಿದರು. ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಟಿ20 ಶೈಲಿಯ ಬ್ಯಾಟಿಂಗ್ ಪ್ರದರ್ಶಿಸಿದರು.

ಈ ಜೋಡಿ ಕೇವಲ ನಾಲ್ಕು ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 50ಕ್ಕೂ ಹೆಚ್ಚು ರನ್ ಗಳಿತು. ರೋಹಿತ್ 11 ಎಸೆತಗಳಲ್ಲಿ 209 ಸ್ಟ್ರೈಕ್ ರೇಟ್ನೊಂದಿಗೆ 23 ರನ್ ಗಳಿಸಿದ ನಂತರ ನಿರ್ಗಮಿಸಿದರು. ಜೈಸ್ವಾಲ್ ಬಳಿಕ ಶುಬ್ಮನ್ ಗಿಲ್ ಮೂಲಕ ಹೊ ಪಾಲುದಾರನನ್ನು ಕಂಡುಕೊಂಡರು. ಇವರಿಬ್ಬರು ಎರಡನೇ ವಿಕೆಟ್ ಗೆ 72 ರನ್‌ಗಳ ಜೊತೆಯಾಟ ನೀಡಿದರು. ಈ ಪಂದ್ಯದಲ್ಲಿ ಭಾರತ ಕೇವಲ 10.1 ಓವರ್ಗಳಲ್ಲಿ 100 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ದಾಖಲೆ ನಿರ್ಮಿಸಿತು. ಜೈಸ್ವಾಲ್ 51 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 72 ರನ್ ಗಳಿಸಿ ಇನ್ನಿಂಗ್ಸ್ ಕೊನೆಗೊಳಿಸಿದರು.

ಇದನ್ನೂ ಓದಿ: Rohit Sharma : ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ಸಾಧನೆ ಮಾಡಿದ ರೋಹಿತ್ ಶರ್ಮಾ

ಕಳೆದ ವರ್ಷ ಪೋರ್ಟ್ ಆಫ್ ಸ್ಪೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 12.2 ಓವರ್‌ಗಳಲ್ಲಿ 100 ರನ್ ಬಾರಿಸಿತ್ತು. ಪ್ರವಾಸದ ಎರಡನೇ ಟೆಸ್ಟ್‌ನಲ್ಲಿ , ರೋಹಿತ್ ಮತ್ತು ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 11.5 ಓವರ್‌ಗಳಲ್ಲಿ 98 ರನ್‌ಗಳ ಜೊತೆಯಾಟ ನೀಡಿತ್ತು. ಆದಾಗ್ಯೂ, ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಆದರೆ ಅದು ದಾಖಲೆ ಮಾಡುವಲ್ಲಿ ನೆರವಾಗಿತ್ತು.

ಟೆಸ್ಟ್ ಇನಿಂಗ್ಸ್‌ನಲ್ಲಿ ಅತಿ ವೇಗದ 100 ರನ್‌ ಬಾರಿಸಿದ ತಂಡಗಳು

  • 10.1 ಬಾಂಗ್ಲಾದೇಶ ವಿರುದ್ಧ ಭಾರತ, ಕಾನ್ಪುರ, 2024
  • 12.2 ವೆಸ್ಟ್ ಇಂಡೀಸ್ ವಿರುದ್ಧ ಭಾರತ . ಪೋರ್ಟ್ ಆಫ್ ಸ್ಪೇನ್ 2023
  • 12.3 ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಕೊಲಂಬೊ 2001
  • 12.3 ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್, ದಿ ಓವಲ್ 1998
  • 13.4 ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ, ಮಿರ್ಪುರ್ 2019
  • 13.4 ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್, ರಾವಲ್ಪಿಂಡಿ 2022