Thursday, 12th December 2024

ಮಹಿಳಾ ಕ್ರಿಕೆಟ್: ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಟ

ಢಾಕಾ: ಜು.16ರಂದು ಢಾಕಾದ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ  ನಡೆಯು ತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಇದಕ್ಕೂ ಮುನ್ನ ನಡೆದ ಟಿ20 ಸರಣಿಯಲ್ಲಿ ಭಾರತೀಯ ಮಹಿಳಾ ತಂಡವು ಬಾಂಗ್ಲಾ ದೇಶ ಮಹಿಳಾ ತಂಡದ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿತ್ತು. ಮೊದಲೆರಡು ಪಂದ್ಯಗಳನ್ನು ಭಾರತ ತಂಡ ಗೆದ್ದರೆ, ಕೊನೆಯ ಪಂದ್ಯವನ್ನು ಆತಿಥೇಯ ಬಾಂಗ್ಲಾದೇಶ ಜಯಿಸಿತ್ತು.

ಟಿ20 ಸರಣಿಗಿಂತ ಭಾರತ ಮಹಿಳಾ ಏಕದಿನ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾ ಗಿದೆ. ಅದೇ ರೀತಿ ಬಾಂಗ್ಲಾದೇಶ ಮಹಿಳಾ ತಂಡವನ್ನು ನಿಗರ್ ಸುಲ್ತಾನಾ ಮುನ್ನಡೆಸು ತ್ತಿದ್ದಾರೆ.

ತಂಡಗಳ ಆಡುವ 11ರ ಬಳಗ

ಬಾಂಗ್ಲಾದೇಶ: ಮುರ್ಶಿದಾ ಖಾತುನ್, ಶರ್ಮಿನ್ ಅಕ್ಟರ್, ಫರ್ಗಾನ್ ಹೊಕ್ಯೂ, ನಿಗರ್ ಸುಲ್ತಾನಾ(ನಾಯಕಿ/ ವಿಕೆಟ್ ಕೀಪರ್), ಶೋರ್ನಾ ಅಕ್ಟರ್, ನಹಿದಾ ಅಕ್ಟರ್, ರಿತು ಮೋನಿ, ಫಾಹಿಮಾ ಖಾತುನ್, ರಬೇಯಾ ಖಾನ್, ಮಾರುಫಾ ಅಕ್ಟರ್, ಸುಲ್ತಾನಾ ಖಾತುನ್.

ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ, ಪ್ರಿಯಾ ಪೂನಿಯಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅಮನ್ಜೋತ್ ಕೌರ್, ಬಾರೆಡ್ಡಿ ಅನುಷಾ, ಸ್ನೇಹ್ ರಾಣಾ.