ಮಂಗಳೂರು: ಶನಿವಾರ ಇಲ್ಲಿ ಮುಕ್ತಾಯ ಕಂಡ ಮಂಗಳೂರು ವಿಶ್ವವಿದ್ಯಾನಿಲಯ(Mangalore University) ಮತ್ತು ಬೆಸೆಂಟ್ ಮಹಿಳಾ ಕಾಲೇಜು(Besant Women’s College) ಸಹಯೋಗದಲ್ಲಿ ಆಯೋಜಿಸಲಾದ 2 ದಿನಗಳ ಮಹಿಳಾ ಅಂತರ್-ಕಾಲೇಜು ಕಬಡ್ಡಿ(Inter-College Women’s Kabaddi) ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು(alva’s college) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರೀಡಾಕೂಟದಲ್ಲಿ ಒಟ್ಟು 42 ತಂಡಗಳು ಪಾಲ್ಗೊಂಡಿದ್ದವು. ಉಜಿರೆಯ ಎಸ್ಡಿಎಂ ಕಾಲೇಜು ದ್ವಿತೀಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಎಸ್ ಎಲ್ ಶೆಟ್ ಡೈಮಂಡ್ ಹೌಸ್, ಮಂಗಳೂರು ಇದರ ಮಾಲಕರಾದ ಶ್ರೀ ರವೀಂದ್ರ ಶೇಟ್ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆ ಶಿಸ್ತು, ಸ್ಥೈರ್ಯವನ್ನು ಕಲಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್ಗಳು!
ಇದೇ ವೇಳೆ ಮಾತನಾಡಿದ ಶ್ರೀಮತಿ ರೇಶ್ಮಾ ಮಲ್ಲ್ಯಾ (ಜೆನರಲ್ ಮ್ಯಾನೇಜರ್, ಕ್ಯಾಮ್ಕೊ ಮಂಗಳೂರು), ಕಬಡ್ಡಿ ಪುರುಷ ಪ್ರಧಾನ ಕ್ರೀಡೆಯಲ್ಲ, ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಸೋಲು ಗೆಲುವಿಗಿಂತ ಆತ್ಮವಿಶ್ವಾಸ ಮುಖ್ಯ ಎಂದರು. ವೇದಿಕೆಯಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಉಪಾಧ್ಯಕ್ಷೆ ಹಾಗೂ WNES ನ ಸಂಚಾಲಕಿ ಡಾ.ಮಂಜುಳಾ ಕೆ.ಟಿ, WNES ನ ಕಾರ್ಯದರ್ಶಿ ಶ್ರೀ ಸುರೇಶ್ ಪೈ, WNES ನ ಅಧ್ಯಕ್ಷರಾದ ಶ್ರೀ ಮನೇಲ್ ಅಣ್ಣಪ್ಪ ನಾಯಕ್ , ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ., ಡಾ. ರಾಮಚಂದ್ರ ಪಾಟ್ಕರ್ ದೈಹಿಕ ಶಿಕ್ಷಣ ನಿರ್ದೇಶಕರು ಅಜ್ಜರಕಾಡು, IQAC ಸಂಯೋಜಕ ಡಾ. ಸತೀಶ ಕೆ, ಕಾಲೇಜಿನ ದೈಹಿಕ ನಿರ್ದೇಶಕಿ ರೂಪತಿ ಎಮ್, ಸದಸ್ಯರಾದ ಡಾ. ಲೋಕರಾಜ್ ವಿ.ಎಸ್ ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಉಪಸ್ಥಿತರಿದ್ದರು.