Friday, 20th September 2024

ಸಿಡ್ನಿ ಟೆಸ್ಟ್‌ ಪಂದ್ಯ: ಸ್ವಾರಸ್ಯಕರ ಸಂಗತಿಗಳು

ಸಿಡ್ನಿ: ಆಸೀಸ್ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್‌ ಫಲಿತಾಂಶ ಡ್ರಾದಲ್ಲಿ ಅಂತ್ಯ ಕಂಡಿದೆ.

ಅಂತೆಯೇ, ಈ ಪಂದ್ಯದ ಮೂಲಕ ಟೀಂ ಇಂಡಿಯಾ ಪರ ಹಲವು ಸ್ವಾರಸ್ಯಕರ ಸಂಗತಿಗಳು ಕಾಣ ಸಿಕ್ಕಿವೆ.

1980ರ ಬಳಿಕ ಟೀಂ ಇಂಡಿಯಾ ಒಂದು ಟೆಸ್ಟ್’ನ ನಾಲ್ಕನೇ ಇನ್ನಿಂಗ್ಸ್’ನಲ್ಲಿ ಭರ್ತಿ 131 ಓವರ್‌ ಆಡಿತು. ಏಷ್ಯನ್‌ ರಾಷ್ಟ್ರಗಳು ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಹೆಚ್ಚು ಓವರ್‌ ಆಡಿದೆ. ಅದು ಶ್ರೀಲಂಕಾ ಮತ್ತು ಭಾರತ.

ಡ್ರಾ ಆಗುವ ಪಂದ್ಯಗಳಲ್ಲಿ ಭಾರತ ಅತೀ ಹೆಚ್ಚು ಪಂದ್ಯವನ್ನಾಡಿದೆ.

ಓವಲ್‌ನಲ್ಲಿ ಇಂಗ್ಲೆಂಡ್‌ ವಿರುದ್ದ 150.5 ಓವರ್‌ (1979),

1948/49ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ಕೋಲ್ಕತಾದಲ್ಲಿ 136  ಓವರ್‌ ಆಡಿತು.

1958/59ರಲ್ಲಿ ಮುಂಬೈನಲ್ಲಿ ವೆಸ್ಟ್‌ ಇಂಡೀಸ್ ವಿರುದ್ದ 132 ಓವರ್‌ ಆಡಿತು.

1979-80ರಲ್ಲಿ ನವದೆಹಲಿಯಲ್ಲಿ ಪಾಕಿಸ್ತಾನ ವಿರುದ್ದ 131 ಓವರ್‌ ಆಡಿತು.

2020-21ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 131 ಓವರ್‌ ಆಡಿತು.