ನವದೆಹಲಿ: ಫೆಬ್ರವರಿ 18 ರಂದು ಚೆನ್ನೈನಲ್ಲಿ ಐಪಿಎಎಲ್ 2021 ರ ಆಟಗಾರರ ಹರಾಜುನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಂದು ಕೊನೆ ಗೊಳ್ಳಲಿದ್ದು, ಮರುದಿನ ಐಪಿಎಲ್ ಹರಾಜು ನಡೆಯಲಿದೆ.
ಆಟಗಾರರನ್ನ ಉಳಿಸಿಕೊಳ್ಳುವ ಕೊನೆಯ ದಿನಾಂಕ ಜ.20 ಆಗಿದ್ದರೆ, ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರ ವರ್ಗಾವಣೆ ಪ್ರಕ್ರಿಯೆ ಫೆಬ್ರವರಿ 4 ರವರೆಗೆ ಮುಂದುವರಿಯುತ್ತದೆ. ತಂಡಗಳಿಂದ ಬಿಡುಗಡೆಯಾದ ಆಟಗಾರರಲ್ಲಿ ಆಸ್ಟ್ರೇಲಿ ಯಾದ ಸ್ಟೀವ್ ಸ್ಮಿತ್ (ರಾಜಸ್ಥಾನ್ ರಾಯಲ್ಸ್) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್) ದಂತಕಥೆಗಳು ಸೇರಿ ದ್ದಾರೆ.
ಬಹುತೇಕ ಎಲ್ಲಾ ತಂಡಗಳು ಪಂದ್ಯಾವಳಿಯ ಮೊದಲು ದೊಡ್ಡ ಆಟಗಾರರನ್ನ ಬಿಡುಗಡೆ ಮಾಡಿವೆ. ರಾಜಸ್ಥಾನ್ ರಾಯಲ್ಸ್ ತಮ್ಮ ನಾಯಕ ಸ್ಟೀವ್ ಸ್ಮಿತ್ ಗೆ ಕೋಕ್ ನೀಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಟಿ 20 ತಜ್ಞರನ್ನ ಸಹ ತಂಡದಿಂದ ಬಿಡುಗಡೆ ಮಾಡಲಾಗಿದೆ.