Tuesday, 19th November 2024

IPL 2025: ಮೆಗಾ ಆಕ್ಷನ್‌ನಲ್ಲಿ ಗರಿಷ್ಠ ಮೊತ್ತ ಪಡೆಯಬಲ್ಲ ವೇಗಿಯನ್ನು ಆರಿಸಿದ ಆಕಾಶ ಚೋಪ್ರಾ!

Aakash Chopra Predicts A 25-Year-Old Arshdeep Singh Pacer To Be Most Expensive At IPL 2025 Mega Auction

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿನಲ್ಲಿ ಭಾರತ ತಂಡದ ಯುವ ವೇಗಿ ಅರ್ಷದೀಪ್‌ ಸಿಂಗ್‌ ಅತ್ಯಂತ ದುಬಾರಿ ಬೌಲರ್‌ ಎನಿಸಿಕೊಳ್ಳಲಿದ್ದಾರೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಆದರೆ, ಆಕ್ಷನ್‌ನಲ್ಲಿ ಅಗ್ರ ಐದು ಅತ್ಯಂತ ದುಬಾರಿ ಬೌಲರ್‌ಗಳನ್ನು ಪಟ್ಟಿ ಮಾಡಿದ ಚೋಪ್ರಾ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ವೇಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಕಡೆಗಣಿಸಿದ್ದಾರೆ.

ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ, ಹರ್ಷಿತ್‌ ರಾಣಾ, ಯಶ್‌ ದಯಾಳ್‌, ಸಂದೀಪ್‌ ಶರ್ಮಾ, ಮಯಾಂಕ್‌ ಯಾದವ್‌ ಹಾಗೂ ಮೊಹ್ಸಿನ್‌ ಖಾನ್‌ ಅವರನ್ನು ಆಯಾ ಫ್ರಾಂಚೈಸಿಗಳು ಮೆಗಾ ಹರಾಜಿನ ನಿಮಿತ್ತ ತನ್ನಲ್ಲಿಯೇ ಉಳಸಿಕೊಂಡಿವೆ. ಇವರನ್ನು ಹೊರತುಪಡಿಸಿ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತವನ್ನು ಪಡೆಯಬಲ್ಲ ಅಗ್ರ ಐವರು ವೇಗದ ಬೌಲರ್‌ಗಳನ್ನು ಆಕಾಶ್‌ ಚೋಪ್ರಾ ಆರಿಸಿದ್ದಾರೆ. ಆದರೆ ಐದನೇ ಸ್ಥಾನಕ್ಕೆ ಕಗಿಸೊ ರಬಾಡ ಅಥವಾ ಮಿಚೆಲ್‌ ಸ್ಟಾರ್ಕ್‌ ಅವರಲ್ಲಿ ಒಬ್ಬರನ್ನು ಚೋಪ್ರಾ ಆರಿಸಿದ್ದಾರೆ.

IPL 2025 Auction: ಐಪಿಎಲ್‌ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ

ಅರ್ಷದೀಪ್‌ ಸಿಂಗ್‌

    ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ ಚೋಪ್ರಾ, “ಅರ್ಷದೀಪ್‌ ಸಿಂಗ್‌ ಅವರಿಗೆ ಅಗ್ರ ಸ್ಥಾನ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಈ ಬಾರಿ 18 ಕೋಟಿ ರೂ ಪಡೆಯಬಹುದು. ಅವರು 18 ಕೋಟಿ ರೂ ಪಡೆಯುವ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಪಡೆಯಲಿದ್ದಾರೆಂದು ನಾನು ಹೇಳುತ್ತೇನೆ. ಪಂಜಾಬ್‌ ಖಾತೆಯನ್ನು ಹೆಚ್ಚಿನ ಹಣವಿದೆ. ಹಾಗಾಗಿ ಅವರು ಮತ್ತೊಮ್ಮೆ ಇದೇ ತಂಡಕ್ಕೆ ಆಡಬಹುದು,” ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2.ಹರ್ಷಲ್‌ ಪಟೇಲ್‌

    “ಎರಡನೇ ಸ್ಥಾನಕ್ಕೆ ಹರ್ಷಲ್‌ ಪಟೇಲ್‌. ಏಕೆಂದರೆ ಮೆಗಾ ಹರಾಜಿನಲ್ಲಿ ಅವರು ಮತ್ತೊಮ್ಮೆ ದೊಡ್ಡ ಮೊತ್ತವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಅವರು ಪರ್ಪಲ್‌ ಪಟೇಲ್‌ ಆಗಿದ್ದರು. ಹರ್ಷಲ್‌ ಪಟೇಲ್‌ ನಿಜವಾದ ವಿಕೆಟ್‌ ಟೇಕರ್‌. ಭಾರತದ ಇತರೆ ಬೌಲರ್‌ಗಳಿಂದ ಅವರು ಡೆತ್‌ನಲ್ಲಿ ಚೆನ್ನಾಗಿ ಬೌಲ್‌ ಮಾಡುತ್ತಾರೆ,” ಎಂದು ಆಕಾಶ ಚೋಪ್ರಾ ಹೇಳಿದ್ದಾರೆ.

    IPL 2025: ಆರ್‌ಸಿಬಿಗೆ ಓಂಕಾರ್ ಸಾಲ್ವಿ ಬೌಲಿಂಗ್‌ ಕೋಚ್‌

    3.ಮೊಹಮ್ಮದ್‌ ಶಮಿ

    ನಂತರ ಮೂರನೇ ಸ್ಥಾನಕ್ಕೆ ಮೊಹಮ್ಮದ್‌ ಶಮಿ ಅವರನ್ನು ಚೋಪ್ರಾ ಆರಿಸಿದ್ದಾರೆ. ಅವರು ಒಂದು ವರ್ಷ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಪಶ್ಚಿಮ ಬಂಗಾಳ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ನಂತರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿಯೂ ಆಡಲಿದ್ದಾರೆ.

    1. ಭುವನೇಶ್ವರ್‌ ಕುಮಾರ್‌

    “ಇನ್ನು ನಾಲ್ಕನೇ ಸ್ಥಾನಕ್ಕೆ ಭುವನೇಶ್ವರ್‌ ಕುಮಾರ್‌. ಭುವಿ ಕೂಡ ಸಾಕಷ್ಟು ಹಣವನ್ನು ಪಡೆಯಲಿದ್ದಾರೆಂದು ಭಾವಿಸುತ್ತೇನೆ. ಅವರ ಬೌಲಿಂಗ್‌ ಅತ್ಯಂತ ಸ್ಥಿರತೆಯಿಂದ ಕೂಡಿರುತ್ತದೆ ಹಾಗೂ ಅವರು ಅದ್ಭುತ ಪಾತ್ರವನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಅವರನ್ನು ಇಷ್ಟಪಡುತ್ತಾರೆ. ಅವರನ್ನು ನಾಲ್ಕನೇ ಸ್ಥಾನದಲ್ಲಿ ಉಳಿಸಿದ್ದೇನೆ ಹಾಗೂ ಅವರು ಮೂರು ಅಥವಾ ಎರಡನೇ ಸ್ಥಾನಕ್ಕೆ ಹೋದರೂ ಅಚ್ಚರಿ ಇಲ್ಲಿ,” ಎಂದು ಹೇಳಿದ್ದಾರೆ.

    IPL 2025 Auction: ಪಂತ್‌, ರಾಹುಲ್‌ ಸೇರಿ 23 ಆಟಗಾರರಿಗೆ 2 ಕೋಟಿ ಮೂಲಬೆಲೆ

    5.ಕಗಿಸೊ ರಬಾಡ

    “ತನ್ನ ನೆಚ್ಚಿನ ಐದನೇ ಸ್ಥಾನಕ್ಕೆ ಕಗಿಸೊ ರಬಾಡ ಅವರನ್ನು ಆರಿಸುತ್ತೇನೆ. ಮೆಗಾ ಹರಾಜಿನ ಆರಂಭದಲ್ಲಿ ಬರುವ ಕಗಿಸೊ ರಬಾಡ ಅವರು ದೊಡ್ಡ ಮೊತ್ತವನ್ನು ಪಡೆಯಲಿದ್ದಾರೆ. ಐದು ಅಥವಾ ಆರು ಕೋಟಿ ರೂ. ಗಳನ್ನು ಅವರು ಪಡೆಯಲಿದ್ದಾರೆ. ಮಿಚೆಲ್‌ ಸ್ಟಾರ್ಕ್‌ ಅವರು ಕೂಡ ಇಲ್ಲಿದ್ದಾರೆ. ಆದರೆ, ಅವರು ಅಗ್ರ ಮೂರರಲ್ಲಿ ಬರುತ್ತಾರೆಂದು ನಾನು ಚಿಂತಿಸುವುದಿಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.