ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Mega Auction) ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿದೆ. ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಐಪಿಎಲ್ ಹರಾಜಿನ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ತಂಡ ದಾಖಲೆಯ 27 ಕೋಟಿ ರೂ. ಗಳಿಗೆ ರಿಷಭ್ ಪಂತ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆ ಮೂಲಕ ಕೆಲ ನಿಮಿಷಗಳ ಹಿಂದೆ 26.75 ಕೋಟಿ ರೂ. ಪಡೆದು ಪಂಜಾಬ್ ಕಿಂಗ್ಸ್ ಸೇರಿದ್ದ ಶ್ರೇಯಸ್ ಅಯ್ಯರ್ ದಾಖಲೆಯನ್ನು ರಿಷಭ್ ಪಂತ್ ಮುರಿದಿದ್ದಾರೆ.
ಮೊದಲ ಸೆಟ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಅವರಿಗಾಗಿ ಮೆಗಾ ಹರಾಜಿನಲ್ಲಿ ಬಿಡ್ ವಾರ್ ನಡೆಯಬಹುದೆಂದು ಮೊದಲೇ ಮೊದಲನೇ ನಿರ್ಧರಿಸಲಾಗಿತ್ತು. ಏಕೆಂದರೆ ನಾಯಕರ ಹುಡುಕಾಟದಲ್ಲಿರುವ ಫ್ರಾಂಚೈಸಿಗಳು ಈ ಇಬ್ಬರಿಗೂ ಬಲೆ ಬೀಸಲು ಎದುರು ನೋಡುತ್ತಿದ್ದರು. ಅದರಂತೆ ಈ ಇಬ್ಬರೂ ಆಟಗಾರರು ಮೊದಲನೇ ಸೆಟ್ ಹರಾಜು ಮುಗಿದ ಬಳಿಕ ದಾಖಲೆಯ ಮೊತ್ತವನ್ನು ಈ ಇಬ್ಬರೂ ಆಟಗಾರರು ಜೇಬಿಗಿಳಿಸಿಕೊಂಡಿದ್ದಾರೆ.
IPL 2025 Auction: ಹರಾಜಿಗೂ ಮುನ್ನ 4 ವಿಕೆಟ್ ಕಿತ್ತು ಮಿಂಚಿದ ಚಹಲ್
ಶ್ರೇಯಸ್ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
ಮೊದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂ ಗಳಿಗೆ ಖರೀದಿಸಿತ್ತು. ಈ ವೇಳೆ ಶ್ರೇಯಸ್ ಅಯ್ಯರ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ರಿಷಭ್ ಪಂತ್ ದಾಖಲೆಯ ಮೊತ್ತವನ್ನು ಜೇಬಿಗಿಳಿಸಿಕೊಳ್ಳುವ ಮೂಲಕ ಶ್ರೇಯಸ್ ಅಯ್ಯರ್ ಅವರನ್ನು ಹಿಂದಿಕ್ಕಿ ಹರಾಜು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
🚨 𝗠𝗼𝘀𝘁 𝗘𝘅𝗽𝗲𝗻𝘀𝗶𝘃𝗲 𝗣𝗹𝗮𝘆𝗲𝗿 𝗔𝗹𝗲𝗿𝘁 🚨
— IndianPremierLeague (@IPL) November 24, 2024
𝙇𝙚𝙩 𝙏𝙝𝙚 𝘿𝙧𝙪𝙢𝙧𝙤𝙡𝙡𝙨 𝘽𝙚𝙜𝙞𝙣 🥁 🥁
𝗥𝗶𝘀𝗵𝗮𝗯𝗵 𝗣𝗮𝗻𝘁 to 𝗟𝘂𝗰𝗸𝗻𝗼𝘄 𝗦𝘂𝗽𝗲𝗿 𝗚𝗶𝗮𝗻𝘁𝘀 for a gigantic 𝗜𝗡𝗥 𝟮𝟳 𝗖𝗿𝗼𝗿𝗲 🔝⚡️ #TATAIPLAuction | #TATAIPL | @RishabhPant17 | @LucknowIPL |… pic.twitter.com/IE8DabNn4V
ರಿಷಭ್ ಪಂತ್ ಅವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಬಿಡ್ವಾರ್ ನಡೆದಿತ್ತು. ಆ ಮೂಲಕ ರಿಷಭ್ ಪಂತ್ ಅವರ ಮೌಲ್ಯ 20 ಕೋಟಿ ರೂ. ಗಳಾಗಿತ್ತು. ಈ ವೇಳೆ ಆರ್ಟಿಎಂ ನಿಯಮದಡಿ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಎದುರು ನೋಡುತ್ತಿತ್ತು. ಆದರೆ, ಲಖನೌ ಫ್ರಾಂಚೈಸಿ ನೇರವಾಗಿ 7 ಕೋಟಿ ರೂ ಗಳನ್ನು ಏರಿಸಿ ರಿಷಭ್ ಪಂತ್ ಅವರನ್ನು ಖರೀದಿಸಿ ಅಚ್ಚರಿ ಮೂಡಿಸಿತು.
ರಿಷಭ್ ಪಂತ್ 2016 ರಿಂದ 2024 ರವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದರು. ಈ ಹಿಂದೆ 2022ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿತ್ತು. ಆದರೆ, 2024ರ ಐಪಿಎಲ್ ಬಳಿಕ ರಿಷಭ್ ಪಂತ್ ಅವರನ್ನು ರಿಲೀಸ್ ಮಾಡಿತ್ತು. ಆದರೆ, ಕೊದಲೆಳೆಯುವ ಅಂತರದಲ್ಲಿ ಪಂತ್ ಅವರಲ್ಲಿ ಡೆಲ್ಲಿ ಫ್ಯಾಂಚೈಸಿ ಕಳೆದಕೊಂಡಿತು.