Saturday, 14th December 2024

IPL 2025 : ಸೌದಿ ಅರೇಬಿಯಾ ಅಲ್ಲ! ಈ ದೇಶದಲ್ಲಿ ಈ ಬಾರಿ ಐಪಿಎಲ್ ಮೆಗಾ ಹರಾಜು

IPL 2025

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2025ರ (IPL 2025 ) ಹರಾಜು ಪ್ರಕ್ರಿಯೆ ಕುತೂಹಲ ಮೂಡಿಸಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರ ಉಳಿಸಿಕೊಳ್ಳುವಿಕೆ ನಿಯಮಗಳನ್ನು ಬಿಡುಗಡೆ ಮಾಡಿದ ಬಳಿಕದಿಂದ ಎಲ್ಲಿ ಹರಾಜು ನಡೆಯುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಹೊರ ದೇಶವನ್ನೇ ಬಿಸಿಸಿಐ ಆಯ್ಕೆ ಮಾಡುವ ಕಾರಣ ಎಲ್ಲಿ ನಡೆಯಬಹುದು ಎಂಬುದೇ ಎಲ್ಲರ ಕುತೂಹಲವಾಗಿದೆ.

ಎಲ್ಲಾ ಕೌತುಕದ ನಡುವೆ ಕ್ರಿಕ್‌ಬಜ್‌ನಲ್ಲಿ ಹೊಸ ವರದಿಗಳು ಐಪಿಎಲ್ ಹರಾಜಿಗೆ ಸಂಭಾವ್ಯ ಸ್ಥಳದ ಬಗ್ಗೆ ಸುಳಿವು ನೀಡಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೌದಿ ಅರೇಬಿಯಾದ ಹೊರತಾಗಿ ಸಿಂಗಾಪುರದಲ್ಲಿ ಈವೆಂಟ್ ಆಯೋಜಿಸಲು ಸಂಭಾವ್ಯ ತಾಣಕ್ಕಾಗಿ ಹುಟುಕಾಟ ನಡೆಸುತ್ತಿದೆ ಎಂದು ವರದಿ ಹೇಳಿದೆ. ಈ ಹಿಂದೆ ಸೌದಿ ಅರೇಬಿಯಾ ಎಂದು ಹೇಳಿದ್ದ ಕಾರಣ ಬದಲಾವಣೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿವೆ.

ನವೆಂಬರ್ ಕೊನೆಯ ವಾರದಲ್ಲಿ ಹರಾಜು

ಐಪಿಎಲ್ ಹರಾಜು ನವೆಂಬರ್ ಕೊನೆಯ ವಾರದಲ್ಲಿ ನಡೆಯುವುದು ಬಹುತೇಕ ನಿಶ್ಚಿತ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈವೆಂಟ್‌ ಆಯೋಜಿಸಲು ಕೆಲವು ಸ್ಥಳಗಳನ್ನು ನೋಡುತ್ತಿದೆ ಎಂದು ವರದಿಯಾಗಿದೆ. ಬಿಡ್ಡಿಂಗ್ ಆಯೋಜಿಸಲು ಸೌದಿ ಅರೇಬಿಯಾ ಆದ್ಯತೆಯ ಆಯ್ಕೆಯಾಗಿದ್ದರೂ ಅಲ್ಲಿ ಕೆಲವೊಂದು ಸವಾಲುಗಳಿವೆ ಎಂದು ಮೂಲಗಳು ತಿಳಿಸಿವೆ.

ಬಿಸಿಸಿಐ ಕೂಡ ದುಬೈನಲ್ಲಿ ಹರಾಜು ನಡೆಸಲು ಯೋಜನೆ ರೂಪಿಇದೆ. ಆದರೆ ಸೌದಿ ಅರೇಬಿಯಾದಲ್ಲಿ ನಡೆಸಲು ಹೆಚ್ಚಿನ ಆದ್ಯತೆ ನೀಡುವುದಕ್ಕೆ ಮುಂದಾಗಿತ್ತು. ಆದಾಗ್ಯೂ ಐಪಿಎಲ್ 2025 ರ ಹರಾಜನ್ನು ಸೌದಿಯಲ್ಲಿ ಆಯೋಜಿಸಲು ಸವಾಲೊಂದು ಎದುರಾಗಿದೆ. ಅಲ್ಲಿನ ವೆಚ್ಚಗಳು ದುಬೈಗಿಂತ ಅಧಿಕವಾಗಿರುವುದು. ಶ್ರೀಮಂತ ಐಪಿಎಲ್ ಸಂಸ್ಥೆಯು ಈ ಸವಾಲನ್ನು ಹೇಗೆ ಸ್ವೀಕರಿಸಲಿದೆ ಎಂಬುದೇ ಚರ್ಚೆಯ ವಿಷಯವಾಗಿದೆ.

ದುಬೈ ಮತ್ತು ಸೌದಿ ಅರೇಬಿಯಾ ಮಾತ್ರವಲ್ಲ, ಬಿಸಿಸಿಐ ಐಪಿಎಲ್ 2025ರ ಹರಾಜಿಗೆ ಆತಿಥ್ಯ ವಹಿಸಲು ಲಂಡನ್ ಆಯ್ಕೆ ಮಾಡುವ ಬಗ್ಗೆಯೂ ಚರ್ಚಿಸಿದೆ. ನವೆಂಬರ್ ಅಂತ್ಯದಲ್ಲಿ ಯುಕೆಯಲ್ಲಿ ಶೀತ ವಾತಾವರಣದಲ್ಲಿ ಈವೆಂಟ್ ಆಯೋಜಿಸುವುದು ಸವಾಲಿನ ಕೆಲಸ ಎಂಬುದು ಅಲ್ಲಿನ ಕೆಲವರ ವಾದವಾಗಿದೆ.

ಈ ಎಲ್ಲ ಪರಿಶೀಲನೆಗಳ ಬಳಿಕ ಸಿಂಗಾಪುರ ಕೂಡ ಪ್ರಮುಖ ಸ್ಥಳಗಳಲ್ಲಿ ಒಂದಾಗುವ ಸಾಧ್ಯತೆಯಿದೆ. ಐಪಿಎಲ್ 2025 ರ ಹರಾಜನ್ನು ಎರಡು ದಿನಗಳ ಕಾಲ ಆಯೋಜಿಸಲು ಮಾತ್ರವಲ್ಲದೆ ಇಡೀ ಐಪಿಎಲ್ ಪರಿವಾರಕ್ಕೆ ಸ್ಥಳಾವಕಾಶ ಕಲ್ಪಿಸಲು ಬಿಸಿಸಿಐ ಬಯಸಿದೆ. ಇದರಲ್ಲಿ 10 ಫ್ರ್ಯಾಂಚೈಸ್ ನಿಯೋಗಗಳು ಮತ್ತು ಜಿಯೋ ಮತ್ತು ಡಿಸ್ನಿ ಸ್ಟಾರ್ ಎಂಬ ಎರಡು ಪ್ರಸಾರಕರನ್ನು ಒಳಗೊಂಡ ದೊಡ್ಡ ಪರಿವಾರ ಸೇರಿದೆ. ಹೀಗಾಗಿ ಅತ್ಯುತ್ತಮ ಸ್ಥಳಾವಕಾಶ ಹೊಂದಿರುವ ಜಾಗವನ್ನು ಹುಡುಕಲಿದೆ.

ಆಟಗಾರರ ಉಳಿಸಿಕೊಳ್ಳುವ ನೀತಿ ಪ್ರಕಟ

ಐಪಿಎಲ್ 2025 ರ ಹರಾಜಿಗೆ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿದೆ. ಈ ಬಾರಿ, ಆಡಳಿತ ಮಂಡಳಿ ಕೆಲವು ಪ್ರಮುಖ ಬದಲಾವಣೆಗಳನ್ನು ತಂದಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ನಿರ್ಧಾರವಾಗಿದೆ.

ಇದನ್ನೂ ಓದಿ : IPL 2025: ಮುಂಬೈ ಇಂಡಿಯನ್ಸ್‌ಗೆ ಪಾರಸ್‌ ಮಾಂಬ್ರೆ ಬೌಲಿಂಗ್‌ ಕೋಚ್‌

10 ಫ್ರಾಂಚೈಸಿಗಳು ತಲಾ 6 ಆಟಗಾರರನ್ನು ಉಳಿಸಿಕೊಳ್ಳಬಹುದು, ಇದರಲ್ಲಿ ಪಂದ್ಯದ ಹಕ್ಕು (ಆರ್‌ಟಿಎಂ) ನಿಬಂಧನೆಯೂ ಸೇರಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚು ಉಳಿಸಿಕೊಳ್ಳುವುದಕ್ಕೆ ತಂಡಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದಿನ ಹರಾಜಿನಲ್ಲಿ ಬಿಸಿಸಿಐ ಕೇವಲ 4 ಆಟಗಾರರಿಗೆ ಮಾತ್ರ ಅವಕಾಶ ನೀಡಿತ್ತು.

ಬಿಸಿಸಿಐ ತಂಡಗಳಿಗೆ ದೊಡ್ಡ ಮೊತ್ತದ ಹಣ ನೀಡಿದೆ. ಎಲ್ಲಾ 10 ಫ್ರಾಂಚೈಸಿಗಳಿಗೆ 120 ಕೋಟಿ ರೂ.ಗಳ ನಗದು ನೀಡಲಾಗುವುದು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಧಿಕ. ಎಷ್ಟು ಭಾರತೀಯ ಅಥವಾ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೆ, ಒಂದು ತಂಡವು ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡರೆ, ಅವರಿಗೆ ಹರಾಜಿಗೆ ಆರ್‌ಟಿಎಂ ಕಾರ್ಡ್‌ ನೀಡಲಾಗಿದೆ.