ಬೆಂಗಳೂರು ; ಪ್ರಮುಖ ಬೆಳವಣಿಗೆಯೊಂದರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತನ್ನ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಮತ್ತು ಕ್ರಿಕೆಟ್ ಅಭಿವೃದ್ಧಿ ಮುಖ್ಯಸ್ಥ ಸಂಜಯ್ ಬಂಗಾರ್ ಅವರನ್ನು ಐಪಿಎಲ್ 2025 (IPL 2025) ಹೊರಕ್ಕೆ ಕಳುಹಿಸಲು ಮುಂದಾಗಿದೆ. ವಿಶೇಷವೆಂದರೆ, ಐಪಿಎಲ್ 2022 ರ ನಂತರ ಬೇಲಿಸ್ ಅವರನ್ನು ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಬಂಗಾರ್ ಡಿಸೆಂಬರ್ 2023 ರಲ್ಲಿ ಫ್ರಾಂಚೈಸಿಯ ಸದಸ್ಯರಾಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ರಿಕಿ ಪಾಂಟಿಂಗ್ ಅವರನ್ನು ಪಂಜಾಬ್ ಕಿಂಗ್ಸ್‌ನ ಮುಖ್ಯ ಕೋಚ್ ಆಗಿ ಹೆಸರಿಸಲಾಗಿದೆ. . ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮುಖ್ಯ ಕೋಚ್ ಹುದ್ದೆಯಿಂದ ಅವರ ಹೊರಕ್ಕೆ ಬಂದ ಕೆಲವೇ ತಿಂಗಳುಗಳ ನಂತರ ಆಸೀಸ್ ದಂತಕಥೆ ಐಪಿಎಲ್ ಮತ್ತೊಂದು ಒಪ್ಪಂದ ಮಾಡಿಕೊಂಡಿದ್ದಾರೆ.
ರಿಕಿ ಪಾಂಟಿಂಗ್ ಪಿಬಿಕೆಎಸ್ ಫ್ರಾಂಚೈಸಿಯೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಅವರ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ. ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಟ್ರೆವರ್ ಬೇಲಿಸ್ ಮತ್ತು ಸಂಜಯ್ ಬಂಗಾರ ಅವರೊಂದಿಗೆ ಬೇರ್ಪಡುವ ನಿರ್ಧಾರವನ್ನು ಫ್ರಾಂಚೈಸಿ ತೆಗೆದುಕೊಂಡಿದೆ. ತಮ್ಮ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಮತ್ತು ಪ್ರದರ್ಶನ ಸುಧಾರಿಸಲು ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆ.
ಜಯ್ ಬಂಗಾರ್ ಅವರು 2014ರಲ್ಲಿ ಮೊದಲ ಬಾರಿಗೆ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ, ಅವರು ಪಂಜಾಬ್‌ಗೆ ಮರಳುವ ಮೊದಲು ಭಾರತ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚಿಂಗ್ ಹುದ್ದೆಯಲ್ಲಿದ್ದರು. ಏತನ್ಮಧ್ಯೆ, ಐಪಿಎಲ್ 2022 ರ ನಂತರ ಬೇಲಿಸ್ ಅವರನ್ನು ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಿಸಲಾಯಿತು, ಅನಿಲ್ ಕುಂಬ್ಳೆ ಅವರ ಸ್ಥಾನವನ್ನು ತುಂಬಿದರು.
2015 ಮತ್ತು 2016ರಲ್ಲಿ ಕೊನೆಯ ಸ್ಥಾನ ಸೇರಿದಂತೆ ಪಂಜಾಬ್ ಕಿಂಗ್ಸ್ ತಂಡ ತಂಡ 2015ರಿಂದ 2019ರ ವರೆಗೆ ಅಂಕಪಟ್ಟಿಯಲ್ಲಿ ದ್ವಿತಿಯಾರ್ಧದಲ್ಲೇ ಸ್ಥಾನ ಪಡೆದುಕೊಂಡಿತ್ತು. ನಂತರದ ವರ್ಷಗಳಲ್ಲಿ 6 ರಿಂದ 8 ರ ನಡುವೆ ಸ್ಥಾನ ಪಡೆದುಕೊಂಡಿದೆ. ಐಪಿಎಲ್ 2024 ರಲ್ಲಿ 9 ನೇ ಸ್ಥಾನ ಪಡೆದಿತ್ತು.
ಕಳೆದ ಒಂದು ವರ್ಷದಿಂದ ಪಂಜಾಬ್ ಕಿಂಗ್ಸ್ ತನ್ನ ನಾಯಕತ್ವದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ ಐಪಿಎಲ್ 2025 ರಲ್ಲಿ ಹೊಸ ನಾಯಕನನ್ನು ಹೊಂದಲಿದೆ.