Saturday, 23rd November 2024

IPL 2025: ಆರ್‌ಸಿಬಿ ಸೇರಲಿದ್ದಾರೆ ಸೂರ್ಯಕುಮಾರ್ ಯಾದವ್‌!

IPL 2025

ಬೆಂಗಳೂರು: ಐಪಿಎಲ್(IPL 2025)​ ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನಡೆಯುವ ಮುನ್ನವೇ ಕೆಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಹೌದು, ಇದೀಗ ವರದಿಯಾದ ಪ್ರಕಾರ ಭಾರತ ಟಿ20 ತಂಡದ ನಾಯಕ, ಪ್ರಸ್ತುತ ಮುಂಬೈ ಇಂಡಿಯನ್ಸ್(mumbai indians) ತಂಡದ ಆಟಗಾರ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರನ್ನು ಆರ್‌ಸಿಬಿ(RCB) ಟ್ರೇಡಿಂಗ್​ ಮೂಲಕ ತಮ್ಮ ತಂಡಕ್ಕೆ ಸೆಳೆಯಲು ಯತ್ನಿಸಿದೆ ಎಂದು ವರದಿಯಾಗಿದೆ.

ಬಿಗ್‌ ನ್ಯೂ ಚಾನೆಲ್‌ ಎಂಬ ಮಾಧ್ಯಮ ವರದಿಯಂತೆ ಸೂರ್ಯಕುಮಾರ್‌ ಯಾದವ್‌ ಅವರನ್ನು ಆರ್‌ಸಿಬಿ ಟ್ರೇಡ್‌ ಮೂಲಕ ತನ್ನ ತಂಡಕ್ಕೆ ಸೇರ್ಪಡೆಗೊಳಿಸಲಿದೆ ಎಂದು ತಿಳಿಸಿದೆ. ಈ ಸುದ್ದಿ ಎಲ್ಲಡೆ ವೈರಲ್‌ ಆಗುತ್ತಿದೆ. ಆರ್‌ಸಿಬಿ ಅಭಿಮಾನಿ ಬಳಗದ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿಯೂ ಈ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಕೆಲವರು ಸೂರ್ಯ ಅವರಿಗೆ ಆರ್‌ಸಿಬಿ ಜೆರ್ಸಿಯ ಎಡಿಟೆಡ್‌ ಫೋಟೊವನ್ನು ತೊಡಿಸಿ ʼವೆಲ್‌ಕಮ್‌ ಟುʼ ಆರ್‌ಸಿಬಿ ಎಂದು ಕಮೆಂಟ್‌ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಹಾಲಕಿ ಚಾಂಪಿಯನ್‌ ಕೆಕೆಆರ್‌ ತಂಡ ಟ್ರೇಡಿಂಗ್​ ಮೂಲಕ ಸೂರ್ಯಕುಮಾರ್‌ ಅವರನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸಲಿದೆ ಎನ್ನಲಾಗಿತ್ತು. ಈಗ ಆರ್‌ಸಿಬಿ ಹೆಸರು ಕೇಳಿ ಬಂದಿದೆ. ಸೂರ್ಯ ಯಾವ ತಂಡ ಸೇರಲಿದ್ದಾರೆ ಎನ್ನುವ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಸೂರ್ಯಕುಮಾರ್​ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

ಇದನ್ನೂ ಓದಿ IPL 2025 : ಕೆಕೆಆರ್‌ ಮೆಂಟರ್ ಹುದ್ದೆಗೆ ಇಬ್ಬರು ವಿದೇಶಿ ಕ್ರಿಕೆಟಿಗರ ನಡುವೆ ಪೈಪೋಟಿ, ಯಾರವರು?

ಮೂಲಗಳ ಪ್ರಕಾರ ಆರ್​ಸಿಬಿ ವಿರಾಟ್​ ಕೊಹ್ಲಿ, ಇಂಗ್ಲೆಂಡ್​ನ ವಿಲ್ ಜಾಕ್ಸ್​ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ನಾಯಕ ಫಾಫ್​ ಡು ಪ್ಲೆಸಿಸ್, ಕ್ಯಾಮರೂನ್​ ಗ್ರೀನ್, ಗ್ಲೆನ್‌ ಮ್ಯಾಕ್ಸ್‌ವೆಲ್‌​ ಸೇರಿ ಉಳಿದೆಲ್ಲ ಆಟಗಾರರನ್ನು​ ಕೂಡ ಕೈಬಿಡಲಿದೆ ಎನ್ನಲಾಗಿದೆ.

ಈ ಬಾರಿಯ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್​ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ. ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಹೀಗಾಗಿ ಸೂರ್ಯಕುಮಾರ್‌ ಅವರನ್ನು ಟ್ರೇಡಿಂಗ್ ಖರೀದಿಸಿ ತಂಡದ ನಾಯಕತ್ವ ನೀಡಲು ಮುಂದಾಗಿದೆ ಎನ್ನಲಾಗಿದೆ.