ನವದೆಹಲಿ: ಕಳೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯವೊಂದರಲ್ಲಿ ಲಖನೌ ಸೂಪರ್ ಜಯಂಟ್ಸ್ ಮಾಲೀಕ ಸಂಜೀವ್ ಗೋಯಾಂಕ ಹಾಗೂ ತಮ್ಮ ನಡುವೆ ನಡೆದಿದ್ದ ವಿವಾದಾತ್ಮಕ ಸಂಭಾಷಣೆ ಬಗ್ಗೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮೊಟ್ಟ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
2022 ಮತ್ತು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ, ಇದೇ ಲಯವನ್ನು ಹದಿನೇಳನೇ ಆವೃತ್ತಿಯಲ್ಲಿ ಮುಂದುವರಿಸುವಲ್ಲಿ ಲಖನೌ ತಂಡ ಎಡವಿತ್ತು. ಅಲ್ಲದೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ನೀಡಿದ್ದ 165 ರನ್‌ಗಳ ಗುರಿಯನ್ನು ಎಸ್‌ಆರ್‌ಎಚ್ ಕೇವಲ 9.4 ಓವರ್‌ಗಳಿಗೆ ಚೇಸ್ ಮಾಡಿ ಭರ್ಜರಿ ಗೆಲುವು ಪಡೆದಿತ್ತು.
KL Rahul: ಐಪಿಎಲ್ ಮೂಲಕ ಟಿ20 ತಂಡಕ್ಕೆ ಕಮ್‌ಬ್ಯಾಕ್; ರಾಹುಲ್ ವಿಶ್ವಾಸ
ಏನಿದು ಘಟನೆ?
ಈ ಪಂದ್ಯದ ಬಳಿಕ ಬೌಂಡರಿ ಲೈನ್ ಬಳಿಕ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯಾಂಕ ಅವರು ಸಾರ್ವಜನಿಕವಾಗಿ ಕೆಎಲ್ ರಾಹುಲ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಕೈ ತೋರಿಸುವ ಮೂಲಕ ಕನ್ನಡಿಗನಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಘಟನೆಯನ್ನು ಮಾಜಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಖಂಡಿಸಿದ್ದರು. ಸಂಜೀವ್ ಗೋಯಾಂಕ ಅವರು ಡ್ರೆಸ್ಸಿಂಗ್ ರೂಂನಲ್ಲಿ ಅಥವಾ ಹೋಟೆಲ್ ಕೊಠಡಿಯಲ್ಲಿ ಈ ರೀತಿ ಮಾತನಾಡಿದ್ದರೆ ಸರಿ ಇರುತ್ತಿತ್ತು. ಆದರೆ, ಸಾರ್ವಜನಿಕವಾಗಿ ಮೈದಾನದಲ್ಲಿ ಕೆಎಲ್ ರಾಹುಲ್ ವಿರುದ್ದ ಕಿಡಿಕಾರಿದ್ದು ಸರಿ ಇಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅಂದ ಹಾಗೆ ಕೆಎಲ್ ರಾಹುಲ್ ಅವರು ಕೂಡ ಈ ಘಟನೆಯಿಂದ ತೀವ್ರವಾಗಿ ಕುಗ್ಗಿ ಹೋಗಿದ್ದರು.
2025ರ ಐಪಿಎಲ್ ಟೂರ್ನಿಗೆ ಕೆಎಲ್ ರಾಹುಲ್ ಅವರು ಬೇರೆ ತಂಡಕ್ಕೆ ಆಡುವುದು ಪಕ್ಕಾ ಎಂದು ಎಲ್ಲರೂ ಭಾವಿಸಿದ್ದರು. ಅದರಂತೆ ಎಲ್ಲರ ಭವಿಷ್ಯ ಇದೀಗ ನಿಜವಾಗಿದೆ. ಮೆಗಾ ಹರಾಜಿಗೆ ಲಖನೌ ಫ್ರಾಂಚೈಸಿಯಿಂದ ಕನ್ನಡಿಗ ರಾಹುಲ್ ಅವರನ್ನು ರಿಲೀಸ್ ಮಾಡಲಾಗಿದೆ. ಅಂದ ಹಾಗೆ ಕೆಎಲ್ ರಾಹುಲ್ ಅವರು 2022ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಹುಲ್ ಅವರು 17ಕೋಟಿ ರೂ. ಗಳಿಗೆ ಲಖನೌ ಸೂಪರ್ ಜಯಂಟ್ಸ್‌ಗೆ ಸೇರ್ಪಡೆಯಾಗಿದ್ದರು.
IPL 2025: ಲಖನೌ ಸೂಪರ್ ಜಯಂಟ್ಸ್ ತೊರೆಯಲು ಬಲವಾದ ಕಾರಣ ತಿಳಿಸಿದ ಕೆಎಲ್ ರಾಹುಲ್!
ವಿವಾದಾತ್ಮಕ ಘಟನೆ ಬಗ್ಗೆ ಕೆಎಲ್ ರಾಹುಲ್ ಪ್ರತಿಕ್ರಿಯೆ
“ಅಂದಿನ ಪಂದ್ಯದ ಬಳಿಕ ನಡೆದಿದ್ದ ಘಟನೆ ಅಷ್ಟೊಂದು ಚೆನ್ನಾಗಿರಲಿಲ್ಲ ಅಥವಾ ಮೈದಾನದಲ್ಲಿ ಯಾರೊಬ್ಬರಿಗೂ ಬೇಡವಾದ ಸಂಗತಿ ಅದಾಗಿದೆ. ಹೌದು, ಈ ಘಟನೆ ತಂಡದ ಎಲ್ಲಾ ಆಟಗಾರರ ಮೇಲೆ ಗಂಭೀರ ಪರಿಣಾಮ ಬೀರಿತ್ತು,” ಎಂದು ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಬಹಿರಂಗಪಡಿಸುವ ಮೂಲಕ ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.
2018ರ ಬಳಿಕ ಇದೇ ಮೊದಲ ಬಾರಿ ಕೆಎಲ್ ರಾಹುಲ್ ಅವರು ಐಪಿಎಲ್ ಹರಾಜಿಗೆ ಬರುತ್ತಿದ್ದಾರೆ. ಅವರು ಕೊನೆಯ ಬಾರಿ ಹರಾಜಿನ ಮೂಲಕ 11 ಕೋಟಿ ರೂ. ಗಳಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಸೇರ್ಪಡೆಯಾಗಿದ್ದರು. ನಂತರ ಪಂಜಾಬ್ ಕಿಂಗ್ಸ್ ತೊರೆದು 2022ರಲ್ಲಿ ಹೊಸ ಫ್ರಾಂಚೈಸಿ ಲಖನೌಗೆ ಸೇರ್ಪಡೆಯಾಗಿದ್ದರು.
AUS-A vs IND-A: ಭಾರತ ‘ಎ’ ತಂಡದ ಪರ ವೈಫಲ್ಯ ಅನುಭವಿಸಿದ ಕನ್ನಡಿಗ ಕೆಎಲ್ ರಾಹುಲ್!
ಲಖನೌ ಉಳಿಸಿಕೊಂಡ ಆಟಗಾರರು
ಲಖನೌ ಸೂಪರ್ ಜಯಂಟ್ಸ್ ತಂಡ ಮೆಗಾ ಹರಾಜಿನ ನಿಮಿತ್ತ ನಿಕೋಲಸ್ ಪೂರನ್ ಅವರನ್ನು 21 ಕೋಟಿ ರೂ. ಗಳಿಗೆ, ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಮಯಾಂಕ್ ಯಾದವ್ ಅವರನ್ನು ತಲಾ 11 ಕೋಟಿ ರೂ. ಗಳಿಗೆ ಉಳಿಸಿಕೊಂಡಿದೆ. ಇವರ ಜೊತೆಗೆ ಆಯುಷ್ ಬದೋನಿ ಹಾಗೂ ಮೊಹ್ಸಿನ್ ಖಾನ್ ಅವರನ್ನು ಅನ್‌ಕ್ಯಾಪ್ಡ್ ಆಟಗಾರರಾಗಿ ಲಖನೌ ಫ್ರಾಂಚೈಸಿ ಉಳಿಸಿಕೊಂಡಿದೆ. ಈ ಇಬ್ಬರಿಗೂ ತಲಾ 4 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.