ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ(IPL Auction 2025) ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆಯುವ ಆಟಗಾರ ಯಾರೆಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದುವರೆಗಿನ ಆಯಾ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಹೀಗಿದೆ.
ವರ್ಷ | ಆಟಗಾರ | ಪಡೆದ ಮೊತ್ತ |
2008 | ಎಂ.ಎಸ್ ಧೋನಿ | 9.5 ಕೋಟಿ ರೂ. |
2009 | ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ | 9.8 ಕೋಟಿ ರೂ. |
2010 | ಶೇನ್ ಬಾಂಡ್ ಮತ್ತು ಕೀರನ್ ಪೊಲಾರ್ಡ್ | 4.8 ಕೋಟಿ ರೂ. |
2011 | ಗೌತಮ್ ಗಂಭೀರ್ | 14.9 ಕೋಟಿ ರೂ. |
2012 | ರವೀಂದ್ರ ಜಡೇಜಾ | 12.8 ಕೋಟಿ ರೂ. |
2013 | ಗ್ಲೆನ್ ಮ್ಯಾಕ್ಸ್‌ವೆಲ್ | 6.3 ಕೋಟಿ ರೂ. |
2014 | ಯುವರಾಜ್ ಸಿಂಗ್ | 14 ಕೋಟಿ ರೂ. |
2015 | ಯುವರಾಜ್ ಸಿಂಗ್ | 16 ಕೋಟಿ ರೂ. |
2016 | ಶೇನ್ ವ್ಯಾಟ್ಸನ್ | 9.5 ಕೋಟಿ ರೂ. |
2017 | ಬೆನ್ ಸ್ಟೋಕ್ಸ್ | 14.5 ಕೋಟಿ ರೂ. |
2018 | ಬೆನ್ ಸ್ಟೋಕ್ಸ್ | 12.5 ಕೋಟಿ ರೂ. |
2019 | ಜಯದೇವ್ ಉನದ್ಕತ್ ಮತ್ತು ವರುಣ್ ಚಕ್ರವರ್ತಿ | 8.4 ಕೋಟಿ ರೂ. |
2020 | ಪ್ಯಾಟ್ ಕಮ್ಮಿನ್ಸ್ | 15.5 ಕೋಟಿ ರೂ. |
2021 | ಕ್ರಿಸ್ ಮೋರಿಸ್ | 16.25 ಕೋಟಿ ರೂ. |
2022 | ಇಶಾನ್ ಕಿಶನ್ | 15.25 ಕೋಟಿ ರೂ. |
2023 | ಸ್ಯಾಮ್ ಕರ್ರಾನ್ | 18.5 ಕೋಟಿ ರೂ. |
2024 | ಮಿಚೆಲ್ ಸ್ಟಾರ್ಕ್ | 24.75 ಕೋಟಿ ರೂ. |
ಈ ಬಾರಿಯ ರಿಟೇನ್‌ನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರರು
ಹೆನ್ರಿಚ್ ಕ್ಲಾಸನ್(ಹೈದರಾಬಾದ್): 23 ಕೋಟಿ
ವಿರಾಟ್ ಕೊಹ್ಲಿ(ಆರ್‌ಸಿಬಿ): 21 ಕೋಟಿ
ನಿಕೋಲಸ್ ಪೂರನ್ (ಎಲ್‌ಎಸ್‌ಜಿ): 21 ಕೋಟಿ
ಇದನ್ನೂ ಓದಿ MS Dhoni: ಐಪಿಎಲ್ ಆಡುವ ಬಗ್ಗೆ ಧೋನಿ ಮಹತ್ವದ ಹೇಳಿಕೆ
ಆರು ಮಂದಿಗೆ 18 ಕೋಟಿ
ಆರು ಮಂದಿ ಆಟಗಾರರು 18 ಕೋಟಿ ಪಡೆದಿದ್ದಾರೆ. ಆ ಮೂಲಕ ಟಾಪ್ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಂದರೆ, ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ , ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್, ಗುಜರಾತ್ ಟೈಟಾನ್ಸ್‌ನ ರಶೀದ್ ಖಾನ್, ಮುಂಬೈ ಇಂಡಿಯನ್ಸ್ ತಂಡದ ಜಸ್‌ಪ್ರೀತ್ ಬೂಮ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಋತುರಾಜ್ ಗಾಯಕ್ವಾಡ್.
ಮೆಗಾ ಹರಾಜಿನಲ್ಲಿ ಒಟ್ಟು 574 ಮಂದಿ ಆಟಗಾರರಿದ್ದಾರೆ. 66 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು.