Sunday, 15th December 2024

RCB ಹೀನಾಯ ಸೋಲಿಗೆ ಏನಂದ್ರು ಕ್ರಿಕೆಟ್ ಪ್ರೇಮಿಗಳು?

ಐಪಿಎಲ್ 14ನೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 9 ವಿಕೆಟ್‌ಗಳ ಭಾರೀ ಅಂತರದ ಸೋಲು ಅನುಭವಿಸಿದೆ.

ಬೆಂಗಳೂರು : ಕೆಕೆಆರ್ ವಿರುದ್ಧ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಸೋಲು ಅನುಭವಿಸಿದೆ. ಈ ಆವೃತ್ತಿಯ ಮೊದಲ ಸೋಲಿನ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯ ದೇವರಿಗೆ, ಸೋತರೂ ಪಾಯಿಂಟ್ ಪಟ್ಟಿಯಲ್ಲಿ ಹತ್ತು ಅಂಕ ಗಳಿಸಿದೆ ಎನ್ನುವ ಮಾತುಗಳು ಆರ್‌ಸಿಬಿ ಅಭಿಮಾನಿಗಳಿಂದ ಕೇಳಿದರೆ, ಬೆಂಗಳೂರು ತಂಡದ ಹೀನಾಯ ಪ್ರದರ್ಶನ, ವಿರಾಟ್ ಕ್ಯಾಪ್ಟನ್ ಇಂದ ಇಳಿದಿದ್ದು ಒಳ್ಳೆಯದಾಯಿತು ಅಂತ ಮತ್ತಷ್ಟು ಜನ ಹೇಳಿದ್ದಾರೆ.

‘ಈ ಆಟವು ಸೋತಿರಬಹುದು, ಆದರೆ ಕೊನೆಯಲ್ಲಿ ನಾವು #IPL2021 ಅನ್ನು ಗೆಲ್ತಿವಿ’ ಎಂದು ಮೇಘಶ್ರೀ ಎನ್ನುವವರು ಕೂ(ಸಾಮಾಜಿಕ ಜಾಲತಾಣ) ಮಾಡಿದ್ದಾರೆ.

‘ಇತಿಹಾಸವನ್ನು ರಚಿಸಲಾಗಿದೆ: ಐಪಿಎಲ್ ಇತಿಹಾಸದಲ್ಲಿ 3 ವಿಭಿನ್ನ ಜೆರ್ಸಿಗಳಲ್ಲಿ ಸೋತ ಮೊದಲ ತಂಡ ಆರ್ಸಿಬಿ’ ಎಂದು ನಿಶ್ಚಿತ್ ಎನ್ನುವವರು ಕೊ ಮಾಡಿದ್ದಾರೆ. ‘ನಿನ್ನೆ #ABD ಔಟ್ ಆದಾಗ ಹಾರ್ಟ್ ಬೀಟ್ ನಿಂತಂಗ್ ಆಗಿತ್ತು! ‘ ಎಂದು ಸುದರ್ಶನ್ ಕೂ ಮಾಡಿದ್ದಾರೆ.

‘ಇದು ನಿಮ್ಮನ್ನು ವ್ಯಾಖ್ಯಾನಿಸುವ ವಿಜಯಗಳು ಮಾತ್ರವಲ್ಲ … ಆಗಾಗ್ಗೆ ನೀವು ಕಳೆದುಕೊಳ್ಳುವ ಮಾರ್ಗವಾಗಿದೆ. ನಿಮ್ಮ ಬಿಡುವಿನ ದಿನಗಳು ಎಷ್ಟು ಕೆಟ್ಟದು !!! #RCB NRR ಘನ ಸೋಲನ್ನು ತೆಗೆದುಕೊಳ್ಳುವಷ್ಟು ಕೆಟ್ಟದಾಗಿ ಕಳೆದುಕೊಳ್ಳದಿರುವ ಮಾರ್ಗವನ್ನು ಕಂಡುಕೊಳ್ಳಬೇಕು. ಶ್ರೇಷ್ಠ ತಂಡಗಳು ಸೋಲಿನಲ್ಲೂ ಸಾಧ್ಯವಾದಷ್ಟು ಕಡಿಮೆ ಕಳೆದುಕೊಳ್ಳಲು ನಿರ್ವಹಿಸುತ್ತವೆ’ ಎಂದು ಕ್ರಿಕೆಟರ್ ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

’11 ಜನ ಆಟಗಾರರಿಗೂ ಬ್ಯಾಟಿಂಗ್ ನೀಡಿ ಮಾನವೀಯತೆ ಮೆರೆದ RCB’ ಎಂದು ಬೇಸರದಲ್ಲಿ ಅಭಿಮಾನಿಯೊಬ್ಬರು ಕೂ ಮಾಡಿದ್ದಾರೆ.