ನವದೆಹಲಿ: ಐಪಿಎಲ್ ಹರಾಜು ಇದೇ ತಿಂಗಳ 19 ರಿಂದ ಆರಂಭವಾಗಲಿದೆ. 10 ಫ್ರಾಂಚೈಸಿಗಳಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಐಪಿಎಲ್ ಅರ್ಜಿ ಆಹ್ವಾನಿಸಿದೆ.
ಇದಕ್ಕಾಗಿ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. 77 ಸ್ಥಾನಗಳು ಖಾಲಿ ಇದ್ದು, ಅದರಲ್ಲಿ 30 ವಿದೇಶಿ ಕ್ರಿಕೆಟಿಗರು ಸೇರಿದ್ದಾರೆ.
ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಾವಿಸ್ ಹೆಡ್, ಕಮ್ಮಿನ್ಸ್, ಸ್ಟಾರ್ಕ್, ಹೇಜಲ್‌ವುಡ್ ಅವರ ಕನಿಷ್ಠ ಬೆಲೆ ರೂ. 2 ಕೋಟಿ. ಭಾರತದ ವೇಗಿಗಳಾದ ಉಮೇಶ್ ಯಾದವ್, ಹರ್ಷಲ್ ಪಟೇಲ್ ಮತ್ತು ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಈ ಪಟ್ಟಿಯಲ್ಲಿದ್ದಾರೆ. ಡಿ.19 ರಂದು ದುಬೈನಲ್ಲಿ ಹರಾಜು ನಡೆಯಲಿದೆ. ಐಪಿಎಲ್ 1166 ಕ್ರಿಕೆಟಿಗರ ಪಟ್ಟಿಯನ್ನು ಫ್ರಾಂಚೈಸಿಗಳಿಗೆ ಕಳುಹಿಸಿದೆ.
ಐಪಿಎಲ್ 2024ಕ್ಕೆ ನಡೆಯಲಿರುವ ಹರಾಜಿಗೆ ಒಟ್ಟು 1166 ಆಟಗಾರರು ತಮ್ಮ ಹೆಸರನ್ನು ನೀಡಿದ್ದಾರೆ. ಹರಾಜಿಗೆ ಭಾರತದ 830 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದರಲ್ಲಿ 336 ವಿದೇಶಿ ಆಟಗಾರರು ಸೇರಿದ್ದಾರೆ. ಇವರಲ್ಲಿ 212 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ.
ನ್ಯೂಜಿಲೆಂಡ್ ತಂಡದಲ್ಲಿ ಆಡುವ ಬೆಂಗಳೂರು ಮೂಲದ ಆಲ್‌ರೌಂಡರ್ ರಚಿನ್ ರವೀಂದ್ರ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಯಾಗಿದೆ.
ಒಟ್ಟು 77 ಆಟಗಾರರ ಆಯ್ಕೆಗೆ ಅವಕಾಶ ಇದೆ. ಅದರಲ್ಲಿ 30 ವಿದೇಶಿ ಆಟಗಾರರನ್ನು ಖರೀದಿಸಬೇಕು. ಹತ್ತು ತಂಡಗಳು ಸೇರಿ ₹ 262. 95 ಕೋಟಿ ವೆಚ್ಚ ಮಾಡಲು ಅವಕಾಶವಿದೆ.
ಆರ್‌ಸಿಬಿಯಿಂದ ಬಿಡುಗಡೆ ಯಾಗಿರುವ ಶ್ರೀಲಂಕಾದ ವಣಿಂದು ಹಸರಂಗಾ ಅವರಿಗೆ ₹ 1.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ.