Sunday, 15th December 2024

ಐಪಿಎಲ್ ಉದ್ಯಮ ಮೌಲ್ಯ 3.2 ಬಿಲಿಯನ್ ಡಾಲರ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವ್ಯಾಪಾರ ಉದ್ಯಮ ಮತ್ತು ಬ್ರಾಂಡ್ ಮೌಲ್ಯಗಳ ಕುರಿತು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ತನ್ನ ಪ್ರಥಮ ವರದಿಯನ್ನು ಬಿಡುಗಡೆ ಮಾಡಿದೆ.

ಐಪಿಎಲ್‌ನ ಏಕೈಕ ಬ್ರಾಂಡ್ ಮೌಲ್ಯವು ಈಗ 3.2 ಬಿಲಿಯನ್ ಡಾಲರ್​ ಆಗಿದೆ. 2022ರಲ್ಲಿ ಇದ್ದ 1.8 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಇದು ಶೇಕಡಾ 80ರಷ್ಟು ಹೆಚ್ಚಾಗಿದೆ.

ಹಾಗೆಯೇ IPL ನ ವ್ಯಾಪಾರ ಉದ್ಯಮ (business enterprise) ಮೌಲ್ಯವು 15.4 ಶತಕೋಟಿ ಡಾಲರ್ ಆಗಿದೆ. ಇದು 2022 ರಲ್ಲಿ ಇದ್ದ 8.5 ಶತಕೋಟಿ ಡಾಲರ್​ಗಳಿಂದ ಶೇಕಡಾ 80 ರಷ್ಟು ಹೆಚ್ಚಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ 212 ಮಿಲಿಯನ್ ಡಾಲರ್​ ಬ್ರ್ಯಾಂಡ್ ಮೌಲ್ಯದೊಂದಿಗೆ ವರ್ಷದಿಂದ ವರ್ಷಕ್ಕೆ ಶೇ 45.2 ರ ದರದಲ್ಲಿ ಬೆಳೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 195 ಮಿಲಿಯನ್ ಡಾಲರ್ ಮೌಲ್ಯದ ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.

ರಾಜಸ್ಥಾನ್ ರಾಯಲ್ಸ್ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಶೇಕಡಾ 103 ರಷ್ಟು ಹೆಚ್ಚಾಗಿದೆ.