Sunday, 15th December 2024

ಐಪಿಎಲ್​ ಮಿನಿ ಹರಾಜು ಆರಂಭಕ್ಕೆ ಕ್ಷಣಗಣನೆ

ಹೈದರಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಋತುವಿನ ಆಟಗಾರರ ಹರಾಜು ಮಂಗಳವಾರ ದುಬೈನಲ್ಲಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಆಟಗಾರರ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.

ಐಪಿಎಲ್​ ಮಿನಿ ಹರಾಜಿಗೆ ಒಟ್ಟು 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ 333 ಹೆಸರುಗಳು ಶಾರ್ಟ್‌ಲಿಸ್ಟ್ ಆಗಿವೆ. 214 ಭಾರತೀಯ ಹಾಗೂ 119 ವಿದೇಶಿ ಆಟಗಾರರಿದ್ದಾರೆ. 116 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ.

ಹರಾಜಿನ ಮೂಲಕ 10 ತಂಡಗಳಲ್ಲಿ ಒಟ್ಟು 77 ಆಟಗಾರರನ್ನು ಖರೀದಿಸಲಾಗುತ್ತದೆ. ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ 30 ಸ್ಥಾನಗಳನ್ನು ಮೀಸಲಿಡಲಾಗಿದೆ. ಹಲವು ತಂಡಗಳು ತಲಾ 30 ಕೋಟಿ ರೂ.ಗೂ ಹೆಚ್ಚು ಹಣ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿವೆ.

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ, ಕ್ವೆನಾ ಮಫಕಾ (17 ವರ್ಷ) ಅತ್ಯಂತ ಕಿರಿಯ ವಯಸ್ಸಿನ ಕ್ರಿಕೆಟಿಗನಾಗಿ ಐಪಿಎಲ್​ ಮಿನಿ ಹರಾಜು ರೇಸ್​​ನಲ್ಲಿ ಕಾಣಿಸಿ ಕೊಂಡಿದ್ದಾರೆ. ಅಫ್ಘಾನಿಸ್ತಾನದ ಮೊಹಮ್ಮದ್ ನಬಿ (38 ವರ್ಷ) ಪಟ್ಟಿಯಲ್ಲಿನ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.