Thursday, 12th December 2024

ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್

ಮುಂಬೈ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಅದೃಷ್ಟವಶಾತ್ 4 ಏಕದಿನ ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

ಅಂಪೈರ್‌ಗಳನ್ನು ಉದ್ದೇಶಪೂರ್ವಕವಾಗಿ ವಂಚಿಸುವ ಯತ್ನ ಮಾಡಿದ್ದಾರೆ ಎನ್ನುವ ಆರೋಪ ಇಶಾನ್ ಮೇಲಿದೆ. ಭಾರತ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಈ ಪ್ರಮಾದ ಎಸಗಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಕೀಪಿಂಗ್ ಮಾಡುವ ವೇಳೆ ಇಶಾನ್ ಕಿಶನ್ ತಪ್ಪು ಮಾಡಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಟಾಮ್ ಲಾಥಮ್ ಕ್ರೀಸ್‌ನಲ್ಲಿದ್ದ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ತಮ್ಮ ಗ್ಲೌಸ್‌ಗಳಿಂದ ಬೇಲ್ಸ್ ಕೆಳಗೆ ಬೀಳಿಸಿ ಅಂಪೈರ್ ಗೆ ಔಟ್‌ಗಾಗಿ ಮನವಿ ಮಾಡಿದರು.

ನಾಯಕ ಟಾಮ್ ಲ್ಯಾಥಮ್ ಅವರ ವಿಕೆಟ್‌ಗೆ ಮನವಿ ಮಾಡುವಾಗ ಭಾರತೀಯ ವಿಕೆಟ್-ಕೀಪರ್ ಬ್ಯಾಟರ್ ಸ್ಪಷ್ಟವಾಗಿ ಅಂಪೈರ್ ಅನ್ನು ವಂಚಿಸಲು ಪ್ರಯತ್ನಿಸಿದರು ಎಂದು ವರದಿ ಹೇಳಿದೆ.

ಲಾಥಮ್ ಬ್ಯಾಟಿಂಗ್ ಮಾಡುವ ವೇಳೆ ಬಾಲ್ ಬೀಟ್ ಮಾಡಿ ಕ್ರೀಸ್‌ನಲ್ಲಿ ನಿಂತಿದ್ದಾಗ ಬೇಲ್ಸ್ ಕೆಳಗೆ ಬೀಳಿಸಿದ ಇಶಾನ್ ಕಿಶನ್, ಲಾಥಮ್ ಹಿಟ್ ವಿಕೆಟ್ ಆಗಿದ್ದಾರೆ ಎಂದು ಸ್ಕ್ವೇರ್ ಲೆಗ್ ಅಂಪೈರ್‌ಗೆ ಮನವಿ ಮಾಡಿದ್ದರು.

ಐಸಿಸಿ ನೀತಿಸಂಹಿತೆಯ ಪ್ರಕಾರ ತಪ್ಪು ಮಾಡಿದ ಆಟಗಾರನಿಗೆ 4 ರಿಂದ 12 ಏಕದಿನ ಪಂದ್ಯ ಅಥವಾ ಟಿ20 ಪಂದ್ಯಗಳಿಂದ ಅಮಾನತು ಮಾಡುವ ಅವಕಾಶವಿದೆ.

Read E-Paper click here