Saturday, 14th December 2024

ಜಡೇಜಾ-ಪಾಂಡ್ಯ ಭರ್ಜರಿ ಜುಗಲ್‌ಬಂದಿ: ಆಸೀಸ್‌ಗೆ 303 ಗೆಲುವಿನ ಗುರಿ

ಕ್ಯಾನ್‌ಬೆರ‍್ರಾ: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸವಾಲಿನ ಮೊತ್ತ ಪೇರಿಸುವಲ್ಲಿ ಯಶ ಕಂಡಿದೆ.

ಒಂದು ಹಂತದಲ್ಲಿ ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ನ್ನು 152 ರ ಮೊತ್ತದಲ್ಲಿ ಕಳೆದುಕೊಂಡು ಕುಸಿತದ ಭೀತಿಯಲ್ಲಿದ್ದ ಭಾರತಕ್ಕೆ ಆಲ್ರೌಂಡರುಗಳಾದ ಹಾರ್ದಿಕ್‌ ಪಾಂಡ್ಯ (92 *) ಹಾಗೂ ರವೀಂದ್ರ ಜಡೇಜಾ(66*) ತಮ್ಮ ಎಂದಿನ ಬ್ಯಾಟಿಂಗ್‌ ಪರಾಕ್ರಮ ಪ್ರದರ್ಶಿಸಿದರು.

ಇಬ್ಬರು ಕೊನೆಯವರೆಗೂ ಔಟಾಗದೆ, ತಂಡದ ಮೊತ್ತವನ್ನು 300 ಗಡಿ ದಾಟಿ ಸುವಲ್ಲಿ ಯಶಸ್ವಿಯಾದರು. ಇಬ್ಬರ ಜತೆಯಾಟ ದಲ್ಲಿ ಕೊನೆಯ ಒಂಬತ್ತು ಓವರುಗಳಲ್ಲಿ 93 ರನ್‌ ಹರಿದು ಬಂತು. ಆರನೇ ಜತೆಯಾಟಕ್ಕೆ ಭರ್ತಿ 150 ರನ್‌ ಸೇರಿಸಿದರು.

ಹಾರ್ದಿಕ್‌ ಪಾಂಡ್ಯ ಪಾಲಿಗೆ ಇಂದಿನದ್ದು ಅತ್ಯಧಿಕ ವೈಯಕ್ತಿಕ ರನ್‌ ಆಗಿದೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ 90 ರನ್‌ ಗಳಿಸಿ ದ್ದರು. ಆರನೇ ವಿಕೆಟ್‌ ಜತೆಯಾಟದಲ್ಲಿ ಟೀಂ ಇಂಡಿಯಾ ಪರ ಮೂಡಿಬಂದ ಮೂರನೇ ಅತ್ಯಧಿಕ ಮೊತ್ತವಾಗಿದೆ.