ಸಿಡ್ನಿ: ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್, ಪ್ರವಾಸಿ ಭಾರತ ವಿರುದ್ಧ ನಡೆಯ ಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.
ಕೋವಿಡ್-19 ಮಾನದಂಡಗಳನ್ನು ಪಾಲಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಪ್ರಾರಂಭದಲ್ಲಿ ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಗ್ಯಾಲರಿಯಿಂದ ಪಂದ್ಯ ನೋಡಲು ಅವಕಾಶ ಮಾಡಿಕೊಡುವ ನಿರ್ಧಾರಕ್ಕೆ ಬಂದಿದೆ.
ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಜನವರಿ 7ರಂದು ಆರಂಭವಾಗ ಲಿದೆ. ಆಯತಪ್ಪಿ ಬಿದ್ದಿರುವ ಪ್ಯಾಟಿನ್ಸನ್ ಪಕ್ಕೆಲುಬುಗೆ ಗಾಯವಾಗಿರುವ ಪರಿಣಾಮ ಮೂರನೇ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.
ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಅವರಂತಹ ಪರಿಣಾಮಕಾರಿ ವೇಗದ ಪಡೆಯನ್ನು ಹೊಂದಿರುವ ಆಸೀಸ್ ತಂಡದಲ್ಲಿ ಜೇಮ್ಸ್ ಪ್ಯಾಟಿನ್ಸನ್ ಬೆಂಚ್ ಕಾಯಬೇಕಾಗಿತ್ತು.