Friday, 15th November 2024

Japan Masters; ಜಪಾನ್ ಮಾಸ್ಟರ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ಕುಮಾಮೊಟೊ(ಜಪಾನ್‌): ಭಾರೀ ನಿರೀಕ್ಷೆಯೊಂದಿಗೆ ಜಪಾನ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌(Japan Masters) ಕೂಟದಲ್ಲಿ ಆಡಲಿಳಿದಿದ್ದ ಅವಳಿ ಒಲಿಂಪಿಕ್‌ ವಿಜೇತೆ ಪಿ.ವಿ. ಸಿಂಧು(P V Sindhu) ಅವರ ಅಭಿಯಾನ(Sindhu exits) ಕೊನೆಗೊಂಡಿದೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡು ನಿರಾಸೆ ಕಂಡಿದ್ದಾರೆ. ಅವರ ಸೋಲಿನಿಂದ ಈ ಕೂಟದಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿದೆ.

ಲಕ್ಷ್ಯ ಸೇನ್‌ ಹಾಗೂ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್‌ ಸೋತ ಬಳಿಕ ಸಿಂಧು ಮಾತ್ರ ಪದಕ ಭರವಸೆಯಾಗಿದ್ದರು. ಇದೀಗ ಅವರು ಕೂಡ ಸೋತು ಹೊರಬಿದ್ದಾರೆ. ಗುರುವಾರ ರಾತ್ರಿ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು ಕೆನಡಾದ ಮಿಚೆಲೆ ಲಿ(Michelle Li) ಅವರ ವಿರುದ್ಧ 21-17, 16-21, 17-21 ಮೂರು ಗೇಮ್‌ಗಳ ಹೋರಾಟ ನಡೆಸಿ ಸೋಲು ಕಂಡರು.

ಇದನ್ನೂ ಓದಿ Mahipal Lomror: ತ್ರಿಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳಿಗೆ ಸಂದೇಶ ರವಾನಿಸಿದ ಆರ್‌ಸಿಬಿ ಸ್ಟಾರ್‌!

ಆರಂಭಿಕ ಗೇಮ್‌ನಲ್ಲಿ ಗೆದ್ದು ಮುನ್ನಡೆ ಸಾಧಿಸಿದ ವೇಳೆ ಸಿಂಧು ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆ ಬಳಿಕದ ಎರಡು ಗೇಮ್‌ನಲ್ಲಿ ಇದೇ ಯಲವನ್ನು ಮುಂದುವರಿಸುವಲ್ಲಿ ವಿಫಲರಾಗಿ ಎದುರಾಳಿಗೆ ಶರಣಾದರು.

ಇಂದು ಅಂತಿಮ ಟಿ20; ಭಾರತಕ್ಕೆ ಸರಣಿ ಗೆಲುವಿನ ತವಕ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ತಂಡ ಇಂದು ಅಂತಿಮ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸೆಂಚುರಿಯನ್‌ನಲ್ಲಿ ಮೂರನೇ ಟಿ20 ಪಂದ್ಯ ಗೆದ್ದು ಬೀಗಿರುವ ಟೀಮ್‌ ಇಂಡಿಯಾ ಇದೀಗ ಅಂತಿಮ ಪಂದ್ಯದಲ್ಲಿಯೂ ಇದೇ ಜೋಶ್‌ನೊಂದಿಗೆ ಜೊಹಾನ್ಸ್‌ಬರ್ಗ್‌ನಲ್ಲಿಯೂ ಆಡುವ ಉಮೇದಿನಲ್ಲಿದೆ.

ಪಿಚ್‌ ರಿಪೋರ್ಟ್‌

ಇಲ್ಲಿನ ವಾಂಡರರ್ ಸ್ಟೇಡಿಯಂನ ಪಿಚ್‌ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ನಡೆದಿರುವ ಬಹುತೇಕ ಎಲ್ಲ ಚುಟುಕು ಪಂದ್ಯದಲ್ಲಿಯೂ ಬೃಹತ್‌ ಮೊತ್ತ ದಾಖಲಾಗಿದೆ. ಕನಿಷ್ಠ 200 ರನ್‌ ಗಳಿಸಲು ಇಲ್ಲಿ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಬೌಲರ್‌ಗಳು ಶಕ್ತಿ ಮೀರಿದ ಪ್ರದರ್ಶನ ತೋರುವ ಅಗತ್ಯವಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ ಜೋಶ್‌ನಲ್ಲಿರುವ ಎಡಗೈ ಬ್ಯಾಟರ್‌ ತಿಲಕ್‌ ವರ್ಮಾ ಬ್ಯಾಟಿಂಗ್‌ ಪ್ರದರ್ಶನದ ಮೇಲೆ ಈ ಪಂದ್ಯದಲ್ಲಿಯೂ ತಂಡ ಭಾರೀ ನಿರೀಕ್ಷೆ ಇರಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಅಭಿಷೇಕ್‌ ಶರ್ಮ ಮತ್ತೆ ಬ್ಯಾಟಿಂಗ್‌ ಲಯಕ್ಕೆ ಮರಳಿರುವುದು ತಂಡಕ್ಕೆ ಕೊಂಚ ಬಲ ಕೊಟ್ಟಿದೆ. ಆದರೆ, ಶತಕ ಬಾರಿಸಿದ ಬಳಿಕ ಸತತವಾಗಿ 2 ಶೂನ್ಯ ಸುತ್ತಿರುವ ಸಂಜು ಸ್ಯಾಮ್ಸನ್‌ ಫಾರ್ಮ್‌ ಬಗ್ಗೆ ಚಿಂತಿಸುವಂತೆ ಮಾಡಿದೆ. ಜತೆಗೆ ಸೂರ್ಯಕುಮಾರ್‌, ಹಾರ್ದಿಕ್‌ ಅವರ ಬ್ಯಾಟ್‌ ಕೂಡ ಸದ್ದು ಮಾಡುತ್ತಿಲ್ಲ. ರಿಂಕು ಕೂಡ ಕಮಾಲ್‌ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಇವರೆಲ್ಲ ನಾಳಿನ ಪಂದ್ಯದಲ್ಲಿ ಸಿಡಿದು ನಿಲ್ಲಬೇಕಾದ ಅನಿವಾರ್ಯತೆ ಇದೆ.