Thursday, 12th December 2024

ಬಿಸಿಸಿಐ ಕಾರ್ಯದರ್ಶಿಗೆ 2023ರ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ಗೌರವ

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರಿಗೆ 2023ರ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಗೆದ್ದ ಶಾ ಅವರನ್ನು ಬಿಸಿಸಿಐ ಅಭಿನಂದನೆ ಸಲ್ಲಿಸಿದೆ.

‘2023 ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್​ ದಿ ಇಯರ್ ಪ್ರಶಸ್ತಿಗೆ ಭಾಜನರಾದ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ಅಭಿನಂದನೆಗಳು. ಕ್ರೀಡಾ ಆಡಳಿತದಲ್ಲಿ ಮೊದಲ ಬಾರಿಗೆ ಈ ವಿಶೇಷ ಗೌರವವ ಪಡೆದ ನೀವು, ಇನ್ನೂ ಕೂಡ ನೂತನ ಪ್ರಯೋಗದೊಂದಿಗೆ ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವಂತಾಗಲಿ’ ಎಂದು ಬಿಸಿಸಿಐ ತನ್ನ ಎಕ್ಸ್​ನಲ್ಲಿ ಬರೆದುಕೊಂಡಿದೆ.ಬಿಸಿಸಿಐ ಕಾರ್ಯದರ್ಶಿ ಹುದ್ದೆಯ ಹೊರತಾಗಿ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹುದ್ದೆ ಅಲಂಕರಿಸುವ ಮುನ್ನ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮಹಿಳಾ ಕ್ರಿಕೆಟ್​ ಆಟಗಾರ್ತಿಯರಿಗೂ ಸಮಾನ ವೇತನ ಜಾರಿಗೆ ತರುವಲ್ಲಿ ಶಾ ಅವರು ಪ್ರಮುಖ ಪಾತ್ರ ವಹಿಸಿದ್ದರು.