Thursday, 19th September 2024

KL Rahul: ರಾಹುಲ್‌ ಲಕ್ನೋ ತಂಡದ ಅವಿಭಾಜ್ಯ ಅಂಗ ಎಂದ ಗೋಯೆಂಕಾ

KL RAhul

ಕೋಲ್ಕತ್ತಾ: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಕೆ.ಎಲ್‌ ರಾಹುಲ್‌(KL Rahul) ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌( LSG )ತಂಡದ ಪರವಾಗಿ ಮುಂದುವರಿಯಲಿದ್ದಾರೆ ಎಂದು 2ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಫ್ರಾಂಚೈಸಿಯ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್‌ ತಮ್ಮ ತಂಡದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಭಾರತ ತಂಡದ ಮಾಜಿ ವೇಗದ ಬೌಲರ್‌ ಜಹೀರ್ ಖಾನ್ ಅವರು ಲಕ್ನೋ ತಂಡದ ಮೆಂಟರ್‌ ಆಗಿ ನೇಮಕಗೊಂಡರು. ಜಹೀರ್‌ಗೆ ಲಕ್ನೋ ತಂಡದ ಜೆರ್ಸಿ ನೀಡಿ ಅವರನ್ನು ಫ್ರಾಂಚೈಸಿಗೆ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೋಯೆಂಕಾ,  ನಾನು ಗಾಳಿಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ, ಒಂದು ಮಾತನ್ನು ಹೇಳಲು ಬಯಸುತ್ತೇನೆ. ರಾಹುಲ್‌ ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದು, ಅವರು ನಮ್ಮ ಕುಟುಂಬದ ಸದಸ್ಯನಿದ್ದಂತೆ ಎಂದು ಹೇಳಿದ್ದಾರೆ. ಅವರ ಈ ಮಾತು ಗಮನಿಸುವಾಗ ರಾಹುಲ್‌ ಮುಂದಿನ ಆವೃತ್ತಿಯಲ್ಲಿಯೂ ಲಕ್ನೋ ತಂಡದ ಪರ ಆಡುವುದು ಬಹುತೇಕ ಖಚಿತ ಎನ್ನುವಂತಿದೆ.

https://x.com/thecricketgully/status/1828656628100481485

17ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ತಂಡ 10 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು. ತಂಡದ ಈ ಸೋಲಿನಿಂದ ಬೇಸರಗೊಂಡಿದ್ದ ಮಾಲಿಕ ಗೋಯೆಂಕಾ, ನಾಯಕನಾಗಿದ್ದ ರಾಹುಲ್‌ ಅವರನ್ನು ಮೈದಾನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. ಹೀಗಾಗಿ, ಮುಂದಿನ ಆವೃತ್ತಿಯಲ್ಲಿ ರಾಹುಲ್‌ ಲಕ್ನೋ ತಂಡವನ್ನು ತೊರೆಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅಲ್ಲದೆ ರಾಹುಲ್‌ ಆರ್‌ಸಿಬಿ ಸೇರಲಿದ್ದಾರೆ ಎಂದು ಭಾರೀ ಚರ್ಚೆಯಾಗಿತ್ತು. ಆದರೆ ಇದೀಗ ಗೋಯೆಂಕಾ ಮತ್ತು ರಾಹುಲ್‌ ನಡುವಿನ ಮನಸ್ತಾಪ ಕೊನೆಗೊಂಡತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ರಾಹುಲ್‌ ಅವರು ಗೋಯೆಂಕಾ ಅವರನ್ನು ಕೋಲ್ಕತ್ತಾದ ಅಲಿಪುರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿದ್ದರು.

https://x.com/LucknowIPL/status/1828737471451943005

ನಾಯಕ ಅಲ್ಲ!

ರಾಹುಲ್​ ಲಕ್ನೋ ತಂಡದ ಪರ ಆಡಿದರೂ ಕೂಡ ಅವರು ನಾಯಕನ ಸ್ಥಾನದಲ್ಲಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ಬ್ಯಾಟಿಂಗ್​ ಕಡೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಅವರು ನಾಯಕತ್ವ ಬೇಡ ಎಂದಿರುವುದಾಗಿ ವರದಿಯಾಗಿದೆ. ನಾಯಕತ್ವದ ಒತ್ತಡದಿಂದ ಅವರಿಗೆ ಸರಿಯಾಗಿ ಬ್ಯಾಟಿಂಗ್​ ಕಡೆ ಗಮನಕೊಡಲು ಸಾಧ್ಯವಾಗದ ಕಾರಣ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.