Friday, 22nd November 2024

KL Rahul : ಲಕ್ನೊ ತಂಡದಿಂದ ರಾಹುಲ್ ಔಟ್‌; ಮೆಂಟರ್‌ ಜಹೀರ್‌ ಸುಳಿವು

KL Rahul

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಹರಾಜಿಗೆ ಮುಂಚಿತವಾಗಿ ಕೆ.ಎಲ್ ರಾಹುಲ್ (KL Rahul) ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಿಡುಗಡೆ ಮಾಡಲಿದೆ. ಐಪಿಎಲ್ ಆಡಳಿತ ಮಂಡಳಿ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ದೃಢಪಡಿಸಿದ ನಂತರ ಈ ಬೆಳವಣಿಗೆ ಆಗಿದೆ. ಫ್ರಾಂಚೈಸಿಗಳು ಉಳಿಸಿಕೊಳ್ಳುವುದು, ರೈಟ್-ಟು-ಮ್ಯಾಚ್ ಮತ್ತು ಹರಾಜಿನಲ್ಲಿ ಹೊಸ ಖರೀದಿಯ ಬಗ್ಗೆ ಯೋಜನೆ ರೂಪಿಸಿದೆ. ಕಳೆದ ವರ್ಷ ಅವರು ಪ್ರದರ್ಶಿಸಿದ ಫಾರ್ಮ್ ಮತ್ತು ಟೀಮ್ ಇಂಡಿಯಾದ ಟಿ 20 ಐ ತಂಡದಿಂದ ಅವರನ್ನು ಹೊರಗಿಟ್ಟಿರುವುದನ್ನು ಪರಿಗಣಿಸಿ ಸೂಪರ್ ಜೈಂಟ್ಸ್‌ ಫ್ರಾಂಚೈಸಿ ರಾಹುಲ್‌ ಅವರನ್ನು ತಂಡದಿಂದ ಹೊರಕ್ಕೆ ಹಾಕಲು ಮುಂದಾಗಿದೆ. ಅವರು ಆ ತಂಡದ ಮಾಲೀಕರ ವಿಶ್ವಾಸ ಉಳಿಸಿಕೊಂಡಿಲ್ಲ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಎಲ್ಎಸ್ಜಿ ಮಾರ್ಗದರ್ಶಕ ಜಹೀರ್ ಖಾನ್ ಮತ್ತು ಕೋಚ್ ಜಸ್ಟಿನ್ ಲ್ಯಾಂಗರ್ ಕಳೆದ ಋತುವಿನಲ್ಲಿ ಫ್ರಾಂಚೈಸಿಯ ಸೋಲಿನಲ್ಲಿ ರಾಹುಲ್ ಪಾತ್ರ ಹೆಚ್ಚಿದೆ ಎಂಬ ವರದಿ ನೀಡಿದ್ದಾರೆ. ಅವರು ರನ್‌ ಗಳಿಸುವ ವೇಳೆ ವ್ಯರ್ಥ ಮಾಡಿದ ಚೆಂಡಗಳೇ ಸೋಲಿಗೆ ಕಾರಣ ಎಂಬುದು ಅವರ ಅಭಿಪ್ರಾಯ. ಹೀಗಾಗಿ ತಂಡದಿಂದ ಕೈ ಬಿಡಲು ಮುಂದಾಗಿದ್ದಾರೆ.

ಮೆಂಟರ್‌ ಜಹೀರ್ ಖಾನ್ ಮತ್ತು ಕೋಚ್ ಜಸ್ಟಿನ್ ಲ್ಯಾಂಗರ್ ಸೇರಿದಂತೆ ಎಲ್ಎಸ್ಜಿ ಮ್ಯಾನೇಜ್ಮೆಂಟ್ ಅವರ ಅಂಕಿಅಂಶಗಳನ್ನು ವಿಶ್ಲೇಷಿಸಿದೆ. ಕೆಎಲ್ ದೀರ್ಘಕಾಲ ಬ್ಯಾಟಿಂಗ್ ಮಾಡಿ ರನ್ ಗಳಿಸಿದ ಎಲ್ಲಾ ಪಂದ್ಯಗಳಲ್ಲಿ ತಂಡವು ಬಹುತೇಕ ಸೋತಿದೆ ಎಂದು ತಿಳಿದುಬಂದಿದೆ. ಇದು ಅವರ ಸ್ಟ್ರೈಕ್ ರೇಟ್ ಆಟದ ಆವೇಗಕ್ಕೆ ಹೊಂದಿಕೆಯಾಗಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕಾರಣಕ್ಕೆ ದೊಡ್ಡ ಸ್ಕೋರ್‌ಗಳು ಮಾಮೂಲಿಯಾಗಿದೆ. ಅಗ್ರ ಕ್ರಮಾಂಕದಲ್ಲಿ ಬ್ಯಾಟರ್‌ ಹೆಚ್ಚು ಎಸೆತ ಹಾಗೂ ಸಮಯ ತೆಗೆದುಕೊಳ್ಳುವುದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಕುರಿತ ವಿವಾದಾತ್ಮಕ ಪೋಸ್ಟ್‌; ಒಡಿಶಾ ನಟನ ವಿರುದ್ಧ ದೂರು

ಎಕ್ಸ್‌ಪ್ರೆಸ್‌ ವೇಗಿ ಮಯಾಂಕ್ ಯಾದವ್ ಎಲ್ಎಸ್ಜಿಯಲ್ಲಿ ಉಳಿಯುವುದು ಖಚಿತ ಎಂದು ವರದಿ ಹೇಳಿದೆ. ವಾಸ್ತವವಾಗಿ, ಅವರು ಫ್ರಾಂಚೈಸಿ ಉಳಿಸಿಕೊಳ್ಳುವ ಅಗ್ರ 3 ಆಟಗಾರರಲ್ಲಿ ಒಬ್ಬರಾಗುವ ಸಾಧ್ಯತೆಯಿದೆ. “ಮಯಾಂಕ್ ಎಲ್ಎಸ್‌ಜಿಯ ಆಟಗಾರ. ಅವರ ಬಗ್ಗೆ ಯಾರಿಗೂ ತಿಳಿದಿಲ್ಲದಿದ್ದಾಗ ಹೂಡಿಕೆ ಮಾಡಿದ್ದರು. ಪಂದ್ಯದ ಮೇಲೆ ಅವರು ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಅವರು ತೋರಿಸಿದ್ದಾರೆ, ಎಂದು ವರದಿ ತಿಳಿಸಿದೆ.

ಆಯುಷ್ ಬದೋನಿ ಮತ್ತು ಮೊಹ್ಸಿನ್ ಖಾನ್ ಅವರಂತಹ ಅನ್‌ಕ್ಯಾಪ್ಡ್‌ ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಲು ನಿರ್ಧರಿಸಿದರೆ, ರಿಷಭ್ ಪಂತ್ ಅವರನ್ನು ನಾಯಕತ್ವದ ಪಾತ್ರಕ್ಕೆ ಖರೀದಿಸಲು ಎಲ್ಎಸ್‌ಜಿ ಆಸಕ್ತಿ ಹೊಂದಿದೆ ಎಂದು ಹೇಳಲಾಗುತ್ತಿದೆ.