KL Rahul: ಮೊದಲ ಎರಡು ಪಂದ್ಯಗಳಿಗೆ ರಾಹುಲ್ ಗೈರು; ಮಾಹಿತಿ ನೀಡಿದ ಆಸೀಸ್ ಆಟಗಾರ್ತಿ
IPL 2025: ಲಕ್ನೋ ಸೂಪರ್ ಜೈಂಟ್ಸ್ (LSG) ರಾಹುಲ್ ಅವರನ್ನು ಬಿಡುಗಡೆ ಮಾಡಿದ ನಂತರ ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂ.ಗೆ ಖರೀದಿಸಿತ್ತು. ಡೆಲ್ಲಿ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಮಾರ್ಚ್ 24 ರಂದು ಈ ಪಂದ್ಯ ನಡೆಯಲಿದೆ.


ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2025 (ಐಪಿಎಲ್ 2025) ನ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ್ತಿ ಅಲಿಸಾ ಹೀಲಿ(Alyssa Healy) ಬಹಿರಂಗಪಡಿಸಿದ್ದಾರೆ. ಆಸೀಸ್ ತಂಡದ, ಡೆಲ್ಲಿ(Delhi Capitals) ಪರ ಆಡಲಿರುವ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪತ್ನಿ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಕುರಿತು ಆನ್‌ಲೈನ್ ಸಂದರ್ಶನದಲ್ಲಿ ಮಾತನಾಡುವ ವೇಳೆ ಹೀಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದರು.
'ಹ್ಯಾರಿ ಬ್ರೂಕ್ ಇಲ್ಲದಿರುವ ಕಾರಣ ಡೆಲ್ಲಿ ತಂಡದ ಬದಲಿ ಆಟಗಾರ ಯಾರೆಂದು ನೋಡುವುದು ಆಸಕ್ತಿದಾಯಕವಾಗಿದೆ. ಕೆಎಲ್ ರಾಹುಲ್ ಅವರು ಬಹುಶಃ ಮೊದಲ ಎರಡು ಪಂದ್ಯಗಳನ್ನು ಆಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮೊದಲ ಎರಡು ಪಂದ್ಯಗಳನ್ನು ಆಡದಿರಬಹುದು' ಎಂದು ಹೀಲಿ ಹೇಳಿದರು. ರಾಹುಲ್ ತಮ್ಮ ಪತ್ನಿ ಅತಿಯಾ ಶೆಟ್ಟಿ ಗರ್ಭಿಣಿಯಾಗಿರುವ ವಿಚಾರವನ್ನು ನವೆಂಬರ್ 2024 ರಲ್ಲಿ ಘೋಷಿಸಿದ್ದರು.
KL RAHUL set to miss first couple of matches #IPL2025 pic.twitter.com/HS7vQJbUU7
— Sanskar Gupta (@Sanskar7701) March 20, 2025
ಲಕ್ನೋ ಸೂಪರ್ ಜೈಂಟ್ಸ್ (LSG) ರಾಹುಲ್ ಅವರನ್ನು ಬಿಡುಗಡೆ ಮಾಡಿದ ನಂತರ ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂ.ಗೆ ಖರೀದಿಸಿತ್ತು. ಅವರನ್ನು ತಂಡದ ನಾಯಕರನ್ನಾಗಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ರಾಹುಲ್ ನಾಯಕತ್ವದಿಂದ ಹಿಂದೆ ಸರಿದರು. ಹೀಗಾಗಿ ಅಕ್ಷರ್ ಪಟೇಲ್ ಅವರಿಗೆ ನಾಯಕತ್ವ ನೀಡಲಾಯಿತು.
ಇದನ್ನೂ ಓದಿ IPL 2025 Fan Parks: ಈ ಬಾರಿ ದೇಶದ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಜೇಕ್ ಫ್ರೇಸರ್ ಮೆಕ್ಗುರ್ಕ್, ಹ್ಯಾರಿ ಬ್ರೂಕ್ ,ಕರುಣ್ ನಾಯರ್, ಸಮೀರ್ ರಿಜ್ವಿ, ಆಶುತೋಷ್ ಶರ್ಮ, ಮೋಹಿತ್ ಶರ್ಮ, ಮುಕೇಶ್ ಕುಮಾರ್, ಫಾಫ್ ಡು ಪ್ಲೆಸಿಸ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಶ್ಮಂತ ಚಮೀರ, ಡೊನೊವನ್ ಫೆರೀರ , ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಣ ವಿಜಯ್, ಮಾಧವ್ ತಿವಾರಿ.