Friday, 22nd November 2024

KL Rahul : ಕೆ. ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಫೇಲ್‌, ಟೆಸ್ಟ್‌ ತಂಡದ ಸ್ಥಾನಕ್ಕೆ ಕುತ್ತು?

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಕೇವಲ 16 ರನ್‌ಗಳಿಗೆ ಔಟ್ ಆದ ನಂತರ ಕೆಎಲ್ ರಾಹುಲ್‌ಗೆ (KL Rahul) ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ನೀಡುತ್ತಿರುವ ಬಗ್ಗೆ ಚರ್ಚೆಗಳು ಎದ್ದಿವೆ. ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದಲ ಆಟಗಾರರು ಕುಸಿತ ಕಂಡಾಗ ರಾಹುಲ್ ನೆರವು ತಂಡಕ್ಕೆ ಬೇಕಾಗಿತ್ತು. ಆದರೆ, ಅವರು ನಿರಾಸೆ ಮೂಡಿಸಿದ್ದು ಬೇಸರಕ್ಕೆ ಕಾರಣವಾಗಿದೆ. ರಾಹುಲ್ 52 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದಾಗ ಅವರಿಗೆ ಯಾಕೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬಂದವು.

ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಅವರಿಗೆ ದಿನದ ಮೊದಲ ವಿಕೆಟ್ ರೂಪದಲ್ಲಿ ರಾಹುಲ್ ಔಟಾದರು. ಐದನೇ ಟೆಸ್ಟ್ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರೊಂದಿಗೆ 48 ರನ್‌ಗಳ ಜೊತೆಯಾಟದ ಸಮಯದಲ್ಲಿ ಸ್ಟ್ರೈಕ್ ಕೊಡಲು ವಿಫಲಗೊಳ್ಳುತ್ತಿದ್ದ ರಾಹುಲ್ ಬ್ಯಾಟಿಂಗ್ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡವು.

ಎರಡನೇ ಸೆಷನ್‌ನ ಆರಂಭದಲ್ಲಿ ರಿಷಭ್ ಪಂತ್ ಅವರನ್ನು ಕಳೆದುಕೊಂಡ ಭಾರತದ ಸ್ಕೋರ್ ರೇಟ್ ಕುಸಿಯಿತು. ಕೆಎಲ್ ರಾಹುಲ್ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಒತ್ತಡ ಹೇರುವ ಬದಲು ತಾವೇ ಒತ್ತಡಕ್ಕೆ ಬಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಪ್ರಭಾವ ಬೀರಿದ್ದ ಸರ್ಫರಾಜ್ ಖಾನ್ ಅವರಿಗಿಂತ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಭಾರತೀಯ ತಂಡದ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಪ್ರಶ್ನಿಸಲಾಯಿತು.

ಇದನ್ನೂ ಓದಿ: India vs Bangladesh : ಅಶ್ವಿನ್ ಶತಕ, ಜಡೇಜಾ ಅರ್ಧ ಶತಕ; ಆರಂಭಿಕ ಕುಸಿತದ ಹೊರತಾಗಿಯೂ ಉತ್ತಮ ಸ್ಥಿತಿಯಲ್ಲಿ ಭಾರತ

ಬೆಂಗಳೂರು ಮೂಲದ ಬ್ಯಾಟರ್‌ ಗಾಯದಿಂದಾಗಿ ಇಂಗ್ಲೆಂಡ್‌ ಸರಣಿಯಲ್ಲಿ ಆಡಲಿರಲ್ಲ. ಈ ವೇಳೆ ಸರ್ಫರಾಜ್ ಖಾನ್ ಆಡಿದ್ದರು. ಇದೀಗ ಮತ್ತೆ ರಾಹುಲ್‌ಗೆ ಅವಕಾಶ ಕೊಟ್ಟರೂ ಅವರು ಮಿಂಚಲು ಪ್ರಯತ್ನಿಸಲಿಲ್ಲ.

ಸರ್ಫರಾಜ್ ಖಾನ್ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಸರಣಿಯ ಮೂರು ಟೆಸ್ಟ್ ಪಂದ್ಯಗಳಲ್ಲಿ 200 ರನ್ ಗಳಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಲೋಡ್‌ಗಟ್ಟಲೆ ರನ್ ಗಳಿಸಿದ ನಂತರ ಕರೆ ಪಡೆದ ಮುಂಬೈ ಬ್ಯಾಟರ್ ತಮ್ಮ ಸಹಜ ಆಟ ಆಡಿದ್ದರು. ವರ್ಷದ ಆರಂಭದಲ್ಲಿ ಸ್ಪಿನ್ನರ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಆಡಿದ್ದರು. 16 ಸದಸ್ಯರ ತಂಡದಲ್ಲಿ ಸರ್ಫರಾಝ್‌ ಆಯ್ಕೆಯಾಗಿದ್ದರೂ ರಾಹುಲ್‌ಗೆ ಅವಕಾಶ ನೀಡಲಾಯಿತು.

ಭಾರತ ತಂಡಕ್ಕಾಗಿ 50 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್‌ 35ಕ್ಕಿಂತ ಕಡಿಮೆ ಸರಾಸರಿ ಹೊಂದಿದ್ದಾರೆ. ರಾಹುಲ್ ಭಾರತಕ್ಕಾಗಿ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೆಲ್ ಅವರನ್ನು ಆಡಿಸುವ ಆಯ್ಕೆಯನ್ನು ಭಾರತ ಹೊಂದಿತ್ತು. ಅದು ಕೂಡ ಕೆಲಸ ಮಾಡಲಿಲ್ಲ.