ಸಿಡ್ನಿ: ಭಾರತೀಯರ ದೀಪಾವಳಿ ಸಂಭ್ರಮಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೂರದ ಆಸ್ಟ್ರೇಲಿಯದಿಂದ ಶುಭ ಸಂದೇಶ ರವಾನಿಸಿದ್ದಾರೆ. ಆದರೆ ಇದೇ ವೇಳೆ, ಸುಡುಮದ್ದುಗಳನ್ನು ಸುಡದೇ ಬೆಳಕು ಮತ್ತು ಸಿಹಿಯೊಂದಿಗೆ ದೀಪಾವಳಿ ಸಂಭ್ರಮವನ್ನು ಆಚರಿಸಿ ಎಂದು ಮನವಿ ಮಾಡಿದ್ದಕ್ಕೆ ಕ್ಯಾಪ್ಟನ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
“ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಸಂದರ್ಭದಲ್ಲಿ ದಯವಿಟ್ಟು ಪಟಾಕಿ ಸುಡಬೇಡಿ. ಪರಿಸರವನ್ನು ಸಂರಕ್ಷಿಸಿ. ಮನೆಯಲ್ಲೇ ನಿಮ್ಮ ಪ್ರೀತಿಪಾತ್ರರೊಡನೆ ಸಿಹಿ ಹಂಚಿಕೊಂಡು, ದೀಪಗಳನ್ನು ಬೆಳಗಿಸಿ ಹಬ್ಬವನ್ನು ಆಚರಿಸಿ’ ಎಂದು ಕೊಹ್ಲಿ ಸಂದೇಶ ರವಾನಿಸಿದ್ದಾರೆ
ಐಪಿಎಲ್ ಪಂದ್ಯದ ವೇಳೆ ಪಟಾಕಿ ಸಿಡಿಸಲ್ವಾ, ಅದನ್ನೂ ಬ್ಯಾನ್ ಮಾಡಿ, ನೀನು ಕ್ರಿಕೆಟ್ ಆಡಿದರೆ ಸಾಕು ಸಲಹೆ ನೀಡಬೇಕಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನು ಜರೆಯುತ್ತಿದ್ದಾರೆ.