Thursday, 19th September 2024

ಟೀಂ ಇಂಡಿಯಾಗೆ ಆಘಾತ: ಕೊಹ್ಲಿ ಔಟ್

ಕ್ಯಾನ್‌ಬೆರಾ: ಆಸೀಸ್‌ ವಿರುದ್ದ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಐವರು ಪೆವಿಲಿಯನ್ ಸೇರಿದ್ದಾರೆ. ವಿರಾಟ್‌ ಕೊಹ್ಲಿ ಕೂಡ ಔಟಾಗಿದ್ದು, 2008 ರಲ್ಲಿ ಏಕದಿನ ಪಾದಾರ್ಪಣೆ ಮಾಡಿದ ಬಳಿ, ಮೊದಲ ಬಾರಿ ಪ್ರಸಕ್ತ ವರ್ಷದಲ್ಲಿ ಏಕದಿನ ಸರಣಿಯಲ್ಲಿ ಶತಕವಿಲ್ಲದೆ ವಂಚಿತರಾದರು.

ಆರಂಭಿಕ ಶುಬ್ಮನ್‌ ಗಿಲ್ 33 ರನ್‌ ಗಳಿಸಿ ಔಟಾದರು. ನಾಯಕ ಕೊಹ್ಲಿ 63 ಮತ್ತು ಕೆ.ಎಲ್‌.ರಾಹುಲ್ ಐದಕ್ಕೆ ಸಾಕೆನಿಸಿಕೊಂಡರು.

ಕ್ರೀಸ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ತಂಡ 5 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.

ಆತಿಥೇಯರ ಪರ ಅಸ್ಟನ್‌ ಅಗರ್‌ ತಮ್ಮ ಹತ್ತು ಓವರುಗಳ ಖಾತೆಯಲ್ಲಿ ಎರಡು ವಿಕೆಟ್‌ ಕಿತ್ತರು. ಮೂರು ವಿಕೆಟ್ ಗಳನ್ನು ವೇಗಿಗಳಾದ ಹ್ಯಾಜಲ್‌ವುಡ್‌, ಅಬೋಟ್‌ ಮತ್ತು ಸ್ಪಿನ್ನರ್‌ ಜಂಪಾ ಕಬಳಿಸಿದರು.

Leave a Reply

Your email address will not be published. Required fields are marked *