Sunday, 8th September 2024

ತೆಂಡೂಲ್ಕರ್ ದಾಖಲೆ ಮುರಿದ ಕೊಹ್ಲಿ

ವದೆಹಲಿ: ಕೊಹ್ಲಿ ವೃತ್ತಿಜೀವನದಲ್ಲಿ ಇದು ಎಂಟನೇ ಬಾರಿಗೆ ಅವರು ಒಂದು ವರ್ಷದಲ್ಲಿ 1000 ರನ್ ಗಳಿಸಿದ ಮೈಲಿಗಲ್ಲನ್ನ ಸಾಧಿಸಿದರು.

ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 1000 ರನ್ ಪೂರೈಸಿದ್ದಾರೆ.

ಈ ಮೂಲಕ ಭಾರತದ ಮಾಜಿ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದಲ್ಲಿ ಏಳು ಬಾರಿ ಈ ಸಾಧನೆ ಮಾಡಿದ ಹಿಂದಿನ ದಾಖಲೆಯನ್ನ ಮುರಿದರು.

ಕೊಹ್ಲಿ 2011, 2012, 2013, 2014, 2017, 2018 ಮತ್ತು 2019 ರಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ತೆಂಡೂಲ್ಕರ್ ಅವರ ಪ್ರಭಾವಶಾಲಿ ಸಾಧನೆ 1994, 1996, 1997, 1998, 2000, 2003 ಮತ್ತು 2007ರಲ್ಲಿ ಮಾಡಿದ್ದರು.

ಜೊತೆಗೆ ಶ್ರೀಲಂಕಾ ವಿರುದ್ಧ 10 ಶತಕಗಳನ್ನ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!