Monday, 25th November 2024

ಕ್ರಿಕೆಟ್‌ನಿಂದ ಎರಡು ವರ್ಷ ಶಕೀಬ್ ಬ್ಯಾನ್

ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯಿಂದ ನಿರ್ಧಾರ ಸ್ಟಾಾರ್ ಆಲ್‌ರೌಂಡರ್ ಕಳೆದುಕೊಂಡ ಬಾಂಗ್ಲಾಾ ಟಿ-20 ವಿಶ್ವಕಪ್‌ಗೂ ಹಸನ್ ಇಲ್ಲ

ದೆಹಲಿ:
ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯ ಭ್ರಷ್ಟಚಾರ ವಿರೋಧಿ ಉಲ್ಲಂಘನೆಯ ಮೂರು ಆರೋಪಗಳನ್ನು ಒಪ್ಪಿಿಕೊಂಡ ಹಿನ್ನೆೆಲೆಯಲ್ಲಿ ಬಾಂಗ್ಲಾಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ.
ನವೆಂಬರ್ 3 ರಿಂದ ಆರಂಭವಾಗುವ ಭಾರತ ಪ್ರವಾಸ ಸೇರಿದಂತೆ ಮುಂದಿನ ವರ್ಷ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ 2020ರ ಅಕ್ಟೋೋಬರ್ 18 ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್‌ನಿಂದಲೂ ಶಕೀಬ್ ಹೊರ ನಡೆಯಲಿದ್ದಾಾರೆ.

ಅಮಾನತುಗೊಂಡಿರುವುದು ಬೇಸರ ತಂದಿದೆ:
ನನ್ನ ಜೀವನದಲ್ಲಿ ಹೆಚ್ಚು ಪ್ರೀತಿಸುವ ಕ್ರಿಿಕೆಟ್‌ನಿಂದ ನನ್ನನ್ನು ಅಮಾನತುಗೊಳಿಸಿರುವುದರಿಂದ ನನಗೆ ಹೆಚ್ಚು ಬೇಸರ ಉಂಟಾಗಿದೆ. ಆದರೆ, ಮ್ಯಾಾಚ್ ಫಿಕ್ಸಿಿಂಗ್ ಸಂಬಂಧ ಬುಕ್ಕಿಿಗಳು ಸಂಪಿರ್ಕಿಸಿದ ಬಗ್ಗೆೆ ಐಸಿಸಿಗೆ ತಿಳಿಸದೆ ಇದ್ದ ಹಿನ್ನೆೆಲೆಯಲ್ಲಿ ಈ ಶಿಕ್ಷೆೆಗೆ ಒಳಗಾಗಿದ್ದೇನೆ ಎಂದು ಶಕೀಬ್ ಅಲ್ ಹಸನ್ ತಪ್ಪುು ಒಪ್ಪಿಿಕೊಂಡಿದ್ದಾಾರೆ.

ವಿಶ್ವದಲ್ಲೇ ಅತಿ ಹೆಚ್ಚು ಕ್ರಿಿಕೆಟ್ ಆಡುವವರು ಹಾಗೂ ಅಭಿಮಾನಿಗಳು ಇದ್ದಾಾರೆ. ಕ್ರಿಿಕೆಟ್ ಕ್ರೀಡೆಯನ್ನು ಭ್ರಷ್ಟಚಾರ ಮುಕ್ತವಾಗಿಸಲು ನಾನು ಐಸಿಸಿ ಎಸಿಯು ಜತೆ ಕೈಜೋಡಿಸುತ್ತೇನೆ. ಎಸಿಯುಯ ಭ್ರಷ್ಟಾಾಚರ ಮುಕ್ತ ಶಿಕ್ಷಣಕ್ಕೆೆ ಒತ್ತು ನೀಡುತ್ತೇನೆ. ನಾನು ಮಾಡಿದ ತಪ್ಪನ್ನು ಭವಿಷ್ಯದಲ್ಲಿ ಯುವ ಆಟಗಾರರು ಮಾಡಬಾರದು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ಆಟಗಾರನಿಗೂ ಇದು ಪಾಠ:
ಶಕೀಬ್ ಅಲ್ ಹಸನ್ ಅವರು ವಿಶ್ವದ ಅತ್ಯಂತ ಅನುಭವಿ ಆಟಗಾರ. ಇವರು ಐಸಿಸಿಯ ಹಲವು ಶಿಕ್ಷಣ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದಾಾರೆ. ಬುಕ್ಕಿಿಗಳು ಸಂಪರ್ಕ ಮಾಡಿದ್ದರ ಬಗ್ಗೆೆ ಅವರು ಐಸಿಸಿಗೆ ಮಾಹಿತಿ ನೀಡಬಹುದಾಗಿತ್ತು. ಆದರೆ, ಅವರು ಗೌಪ್ಯವಾಗಿ ಇಟ್ಟಿಿದ್ದರು. ಭವಿಷ್ಯದಲ್ಲಿ ಇಂಥ ತಪ್ಪುುಗಳು ಜರುಗದಂತೆ ಪ್ರತಿಯೊಬ್ಬ ಆಟಗಾರನಿಗೆ ಪಾಠವಾಗಬೇಕು ಎಂಬ ಲೆಕ್ಕದಲ್ಲಿ ಶಕೀಬ್ ಅವರನ್ನು ಎರಡು ವರ್ಷ ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಜನರಲ್ ಮ್ಯಾಾನೇಜರ್ ಅಲೆಕ್‌ಸ್‌ ಮಾರ್ಷಲ್ ತಿಳಿಸಿದ್ದಾಾರೆ.

ಶಕೀಬ್ ಅಲ್ ಹಸನ್ ತಾನು ಎಸಗಿದ ತಪ್ಪನ್ನು ಒಪ್ಪಿಿಕೊಂಡಿದ್ದಾಾರೆ ಹಾಗೂ ಈ ಪ್ರಕರಣದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾಾರೆ. ಭವಿಷ್ಯದಲ್ಲಿ ಯುವ ಕ್ರಿಿಕೆಟಿಗರು ಇಂಥ ತಪ್ಪನ್ನು ಮಾಡದೆ ಎಚ್ಚರ ವಹಿಸಬೇಕೆಂಬ ನಿಟ್ಟಿಿನಲ್ಲಿ ಬಾಂಗ್ಲಾಾ ಆಲ್‌ರೌಂಡರ್ ಶಿಕ್ಷಣ ನೀಡಲು ಒಪ್ಪಿಿಕೊಂಡಿರುವುದು ಸಂತಸ ತಂದಿದೆ ಎಂದು ಅಲೆಕ್‌ಸ್‌ ಹೇಳಿದರು.
ಏನಿದು ಪ್ರಕರಣ?

ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆೆ ಸಂಬಂಧಪಟ್ಟಂತೆ ಬುಕ್ಕಿಿಗಳಿಂದ ಶಕಿಬ್ ಭಾರಿ ಆಫರ್ ಗಿಟ್ಟಿಿಸಿಕೊಂಡಿದ್ದರು. ಈ ವಿವರವನ್ನು ಶಕಿಬ್, ಐಸಿಸಿ ಭ್ರಷ್ಟಾಾಚಾರ ತಡೆ ಮತ್ತು ಸುರಕ್ಷಾ ವಿಭಾಗಕ್ಕೆೆ (ಎಸಿಎಸ್‌ಯು) ವರದಿ ಮಾಡದೇ ಗೌಪ್ಯವಾಗಿಟ್ಟುಕೊಂಡಿದ್ದರು. ಇತ್ತೀಚೆಗಷ್ಟೇ ಎಸಿಎಸ್‌ಯು ವಿಚಾರಣೆಯ ವೇಳೆ ಅಧಿಕಾರಿಗಳ ಮುಂದೆ ಶಕಿಬ್ ಅಲ್ ಹಸನ್ ತಪ್ಪುು ಒಪ್ಪಿಿಕೊಂಡಿದ್ದರು.

ರಹೀಮ್ ಹೆಗಲಿಗೆ ತಂಡ ಮುನ್ನಡೆಸುವ ಹೊಣೆ:
ಶಕೀಬ್ ಅಲ್ ಹಸನ್ ಅವರು ಅನುಪಸ್ಥಿಿಯಲ್ಲಿ ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಯಲ್ಲಿ ಬಾಂಗ್ಲಾಾದೇಶ ತಂಡವನ್ನು ಮುಷ್ಪಿಿಕ್ಯೂರ್ ರಹೀಮ್ ಮುನ್ನಡೆಸಲಿದ್ದಾಾರೆ. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಬಾಂಗ್ಲಾಾದ ನಾಯಕತ್ವವನ್ನು ಮಹಮುದುಲ್ಲಾಾ ರಿಯಾದ್ ಅಥವಾ ಮೊಸದೆಕ್ ಹುಸೇನ್ ವಹಿಸಿಕೊಳ್ಳಲಿದ್ದಾಾರೆ.

ಬಾಂಗ್ಲಾಾದೇಶ ತಂಡಕ್ಕೆೆ ಭಾರಿ ನಷ್ಟ
ಬಾಂಗ್ಲಾಾದೇಶ ಕ್ರಿಿಕೆಟ್ ತಂಡದಲ್ಲಿ ಶಕೀಬ್ ಅಲ್ ಹಸನ್ ಅತ್ಯಂತ ಪ್ರಮುಖ ಆಟಗಾರ. ಬ್ಯಾಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತಂಡಕ್ಕೆೆ ಆಸರೆಯಾಗಬಲ್ಲರು. ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿ ಬಾಂಗ್ಲಾಾದೇಶ ತಂಡದಲ್ಲಿ ಆಡುತ್ತಿಿರುವ ಶಕೀಬ್, ಇಂಗ್ಲೆೆಂಡ್ ಹಾಗೂ ವೇಲ್‌ಸ್‌ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಏಕಿದಿನ ವಿಶ್ವಕಪ್‌ನಲ್ಲಿ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲೀಗ್ ಹಂತದ ಎಂಟು ಪಂದ್ಯಗಳಿಂದ ಅವರು 86.57ರ ಸರಾಸರಿಯಲ್ಲಿ ಒಟ್ಟು 606 ರನ್ ದಾಖಲಿಸಿದ್ದರು. ಆ ಮೂಲಕ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಿಯಲ್ಲಿ ಶಕೀನ್ ಮೂರನೇ ಸ್ಥಾಾನ ಪಡೆದಿದ್ದರು. ಜತೆಗೆ, ಬೌಲಿಂಗ್‌ನಲ್ಲೂ ಮಿಂಚಿದ್ದರು. ಎಂಟು ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದರು. ಇದೀಗ, ಅವರ ಅನನುಪಸ್ಥಿಿಯಲ್ಲಿ ಬಾಂಗ್ಲಾಾದೇಶ ಮುಂದಿನ ವರ್ಷ ಐಸಿಸಿ ಟಿ-20 ವಿಶ್ವಕಪ್ ಆಡಲಿದೆ.